Wednesday, June 7, 2023

Latest Posts

ಆಪರೇಷನ್ ಕಾವೇರಿ: 3ನೇ ಬ್ಯಾಚ್‌ನಲ್ಲಿ ಸುಡಾನ್‌ನಿಂದ 135 ಭಾರತೀಯರು ತಾಯ್ನಾಡಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸುಡಾನ್ ಸೇನಾ ಸಂಘರ್ಷದಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಕರೆತರುವ ಆಪರೇಷನ್ ಕಾವೇರಿ ಕಾರ್ಯಾಚರಣೆ ಮುಂದುವರೆದಿದ್ದು, ಐಎಎಫ್ ನ ಎರಡನೇ ವಿಮಾನ C-130J ದಲ್ಲಿ 135 ಭಾರತೀಯರ ಮೂರನೇ ಬ್ಯಾಚ್ ಬುಧವಾರ ಸುಡಾನ್‌ನಿಂದ ಹೊರಟಿದೆ.

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್, ಸುಡಾನ್‌ನಿಂದ ಆಗಮಿಸಿದ 148 ಭಾರತೀಯರ ಎರಡನೇ ಬ್ಯಾಚ್ ಅನ್ನು ಸ್ವಾಗತಿಸಿದರು.

ಇದಕ್ಕೂ ಮುನ್ನ ನೌಕಾಪಡೆಯ ನೌಕೆ ಐಎನ್‌ಎಸ್ ಸುಮೇಧಾ 278 ಭಾರತೀಯರನ್ನು ಜೆಡ್ಡಾ ಬಂದರಿಗೆ ತಲುಪಿಸಿತ್ತು.

“ಆಪರೇಷನ್ ಕಾವೇರಿ ಸಂಪೂರ್ಣ ಸ್ವಿಂಗ್‌ನಲ್ಲಿದೆ. ಐಎಎಫ್ ನ C-130J ಎರಡನೇ ವಿಮಾನವು ಪೋರ್ಟ್ ಸುಡಾನ್‌ನಿಂದ ಜೆಡ್ಡಾಗೆ ಹೊರಡುತ್ತಿದೆ. ಈ ವಿಮಾನದಲ್ಲಿ 135 ಪ್ರಯಾಣಿಕರಿದ್ದು, ಆಪರೇಷನ್ ಕಾವೇರಿ ಅಡಿಯಲ್ಲಿ ಸ್ಥಳಾಂತರಿಸಲ್ಪಟ್ಟ ಮೂರನೇ ಬ್ಯಾಚ್ ಇದಾಗಿದೆ” ಎಂದು ಎಂಇಎ ಟ್ವೀಟ್ ಮಾಡಿದೆ.

ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ದೇಶದಕ್ಕೆ ಕರೆತರುವ ಉದ್ದೇಶದಿಂದ ಕೇಂದ್ರ ಸರ್ಕಾರವು ʼಆಪರೇಶನ್‌ ಕಾವೇರಿʼ ಕಾರ್ಯಾಚರಣೆಗೆ ಸೋಮವಾರ ಚಾಲನೆ ನೀಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!