April 22, 2026
Wednesday, April 22, 2026
spot_img

ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ: ಕಾಂಗ್ರೆಸ್ ವಿರುದ್ದ ಜೆಡಿಎಸ್ ಬೃಹತ್ ಪ್ರತಿಭಟನೆ

ಹೊಸದಿಗಂತ ವರದಿ, ಬೆಳಗಾವಿ :

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಮಹಿಳೆಯರಿಗೆ ಮೀಸಲು ನೀಡಲು ವಿಧೇಯಕಕ್ಕೆ ಸಂಸತ್ ನಲ್ಲಿ ಒಮ್ಮತದ ಮತ ಸಿಗದ ಹಿನ್ನೆಲೆ ಮಸೂದೆಗೆ ಹಿನ್ನೆಡೆಯಾಗಿದ್ದು, ಈ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಜಿಡಿಎಸ್ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ .

ಬುಧವಾರ ನಗರದ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಪ್ರತಿಭಟನಾ ರ್ಯಾ ಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಿಗಬೇಕಾದ ಹಕ್ಕು ನೀಡಲು ನಿರ್ಧರಿಸಿತು. ಆದರೆ ಪ್ರತಿ ಪಕ್ಷ ಕಾಂಗ್ರೆಸ್ ವಿರೋಧಿಸಿರುವುದರಿಂದ ವಿಧೇಯಕದ ಸೋಲಿಗೆ ಕಾರಣವಾಗಿದೆ. ಈ ವಿಧೇಯಕದ ಸೋಲನ್ನು ವಿಜಯೋತ್ಸವವನ್ನಾಗಿ ಆಚರಿಸುವ ವಿರೋಧ ಪಕ್ಷಗಳ ನೀತಿಯನ್ನು ಎನ್ ಡಿಎ ಮೈತ್ರಿಕೂಟ ಗಂಭೀರವಾಗಿ ಖಂಡಿಸುತ್ತದೆ ಎಂದು ಹೋರ ಹಾಕಿದರು.

ಜೆಡಿಎಸ್ ಮಾಜಿ ಪ್ರಧಾನಿಗಳು ಹೆಚ್.ಡಿ. ದೇವೇಗೌಡರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ, ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 33 ರಷ್ಟು ಮೀಸಲಾತಿ ನೀಡಿದರು. ಅವರು ದೇಶದ ಪ್ರಧಾನಿಯಾಗಿದ್ದಾಗ ಪ್ರಥಮ ಬಾರಿಗೆ ಮಹಿಳಾ ಮೀಸಲಾತಿ ವಿಧೇಯಕವನ್ನು ಸಂಸತ್ನಲ್ಲಿ ಮಂಡಿಸಿದ್ದರು. ಆದರೆ ಬೆಂಬಲದ ಕೊರತೆ ಮತ್ತು ರಾಜಕೀಯ ಪಕ್ಷಗಳಲ್ಲಿ ಒಡಂಬಡಿಕೆ ಇಲ್ಲದ ಕಾರಣ ವಿಧೇಯಕ ಅಂಗೀಕಾರವಾಗಲಿಲ್ಲ. ಕಾಂಗ್ರೆಸ್ ಮೊದಲಿನಿಂದಲೂ ಮಹಿಳೆಯರನ್ನು ವಿರೋಧಿಸಿಕೊಂಡು ಬರುತ್ತಿದೆ. ಮಹಿಳೆಯ ಸಬಲೀಕರಣಕ್ಕೆ ಸದಾ ವಿರೋಧಿ ನಿಲುವು ತೋರುತ್ತಿರುವ ಕಾಂಗ್ರೆಸ್ ಪಕ್ಷ ಮತ್ತು ವಿರೋಧ ಪಕ್ಷಗಳ ಧೋರಣೆಯ ವಿರುದ್ಧ ಖಂಡನೆಯನ್ನು ವ್ಯಕ್ತಪಡಿಸಲು ರಾಜ್ಯಾಧ್ಯಂತ ಜೆಡಿಎಸ್ ಪ್ರತಿಭಟನೆಯನ್ನು ಮಾಡಿತಿದೆ ಎಂದು ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ ಆಕ್ರೋಶವನ್ನು ಹೋರ ಹಾಕಿದರು.

ಬರುವ ದಿನಗಳಲ್ಲಿ ಮಹಿಳಾ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರತಿಭಟನೆಯ ಮೂಲಕ ಮಹಿಳಾ ವಿರೋಧಿ ಗಾಂಧಿ ಕುಟುಂಬಕ್ಕೆ ಎಚ್ಚರಿಕೆಯನ್ನು ನೀಡಿದರು.

ಈ ವೇಳೆ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ, ಯುವ ಜನತಾ ಧಳ ಅಧ್ಯಕ್ಷ ಸನೀಲ್ ವೇರನೇಕರ್, ತಾಲೂಕು ಅಧ್ಯಕ್ಷ ರಾಜು ರೊಟ್ಟಿ, ಯುವ ಘಟಕ ಅಧ್ಯಕ್ಷ ಬಿಎನ್ ಪಾಟೀಲ, ರಾಮು ರಜಪೂತ್, ಬಸವರಾಜ್ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !