ಚಿಂಪಾಂಜಿ ಕೈಯಲ್ಲಿ ತಗಲಾಕ್ಕೊಂಡ ವ್ಯಕ್ತಿ, ಕೊನೆಗೆ ಏನಾಯಿತೆಂದರೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯಕ್ಕೆ ಭೇಟಿ ನೀಡಿದ ವ್ಯಕ್ತಿಯೊಬ್ಬನನ್ನು ಚಿಂಪಾಂಜಿ ಕೈಯಲ್ಲಿ ಸಿಕ್ಕಿ ಒದ್ದಾಡಿರುವ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಿಂಪಾಂಜಿಯನ್ನು ಮಾತಾಡಿಸಲು ಪ್ರಯತ್ನಿಸುತ್ತಿದ್ದಂತೆ ಟೀ ಶರ್ಟ್‌ ಹಿಡಿದು ಎಳೆದುಕೊಂಡಿದೆ. ಬಿಡಿಸಿಕೊಳ್ಳಲು ಯತ್ನಿಸಿದ ಪ್ರಯತ್ನಗಳೆಲ್ಲಾ ವಿಫಲಾವಗಿವೆ.

ಆತನನ್ನು ಕಾಪಾಡಲು ಬಂದ ಮತ್ತೊಬ್ಬ ವ್ಯಕ್ತಿಗೂ ಕ್ಯಾರೆ ಅನ್ನದ ಚಿಂಪಾಂಜಿ ಶರ್ಟ್‌ ಬಿಟ್ಟು ಕಾಲುಗಳನ್ನು ಬಿಗಿಯಾಗಿ ಹಿಡಿದುಕೊಂಡಿದೆ. ಚಿಂಪಾಂಜಿ ಎಳೆದ ರಭಸಕ್ಕೆ ವ್ಯಕ್ತಿ ಬೋನ್‌ಗೆ ಸಿಕ್ಕಿಕೊಂಡಿದ್ದಾನೆ. ಕೊನೆಗೆ ಮೇಲಕ್ಕೆತ್ತಿ ನೆಲಕ್ಕಿಳಿಸಿದೆ. ಈ ಘಟನೆ ಬಗ್ಗೆ ಮೃಗಾಲಯ ಕ್ಷಮೆಯಾಚಿಸಿದ್ದು, ಮತ್ತೊಮ್ಮೆ ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸುವುದಾಗಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!