Tuesday, March 28, 2023

Latest Posts

ಸಿಡ್ನಿಯಲ್ಲಿ ಐದು ಚಿನ್ನದ ಪದಕ ಬಾಚಿದ ಕೊಡಗಿನ ಹಿರಿಯರು!

ಹೊಸದಿಗಂತ ವರದಿ, ಮಡಿಕೇರಿ:

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ‌ ನಡೆಯುತ್ತಿರುವ ಮಾಸ್ಟರ್ ಗೇಮ್ಸ್ ಚಾಂಪಿಯನ್’ಸಿಪ್’ನಲ್ಲಿ ಭಾಗವಹಿಸಿರುವ ಕೊಡಗಿನ ಮೂವರು ಕ್ರೀಡಾಪಟುಗಳು ಸೋಮವಾರ ಒಟ್ಟು 5 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.
ವಿಶೇಷವೆಂದರೆ ಇಬ್ಬರು ಸಹೋದರರು ಈ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿ ಬೆರಗು ಮೂಡಿಸಿದ್ದಾರೆ.
ಗೋಣಿಕೊಪ್ಪ ಹಾಗೂ ಕದನೂರು ಗ್ರಾಮಗಳ ನಿವಾಸಿಗಳಾದ ಪಾಲೆಕಂಡ ಬೆಳ್ಳಿಯಪ್ಪ ಹಾಗೂ ಪಾಲೆಕಂಡ ಬೋಪಯ್ಯ ಸಹೋದರರು ಭಾರತವನ್ನು ಪ್ರತಿನಿಧಿಸಿರುವ ಅಪರೂಪದ ಸಹೋದರರು. ಇವರಿಬ್ಬರೂ ಭಾರತದಲ್ಲಿ ನಡೆದ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟದಲ್ಲಿ ಇದುವರೆಗೆ 13 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದರು.
ಬೋಪಯ್ಯ ಅವರು ಜಾವಲಿನ್ ಥ್ರೋ ಹಾಗೂ ಡಿಸ್ಕಸ್ ಥ್ರೋನಲ್ಲಿ, ಹಾಗೂ ಬೆಳ್ಳಿಯಪ್ಪ ಅವರು 100 ,200 , 1500 ಮೀಟರ್ ಕಾಲ್ನಡಿಗೆ ರೇಸ್’ನಲ್ಲಿ ಭಾಗವಹಿಸಿದ್ದಾರೆ.
ಹಿರಿಯರ ಕ್ರೀಡಾಕೂಟದಲ್ಲಿ ಬಿಎಸ್ಎನ್ಎಲ್’ನ ನಿವೃತ್ತ ಉದ್ಯೋಗಿ, ಕರ್ನಾಟಕದ ಮಾಸ್ಟರ್ಸ್ ಕ್ರೀಡಾಕೂಟ ಸಂಘದ ಅಧ್ಯಕ್ಷೆ ಮಾರಮಾಡ ಮಾಚಮ್ಮ ಅವರು ಕೂಡಾ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!