2024ರ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಡೇಟ್‌ ಫಿಕ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2023ರ ಆಸ್ಕರ್​ ಪ್ರಶಸ್ತಿ ಸಮಾರಂಭ ಇತ್ತೀಚೆಗೆ ನಡೆದಿತ್ತು. ಆ ಗುಂಗಿನಿಂದ ಹೊರಬರುವ ಮೊದಲೇ 2024ರ ಪ್ರಶಸ್ತಿ ಸಮಾರಂಭದ ದಿನಾಂಕಗಳು ಘೋಷಣೆಯಾಗಿದೆ.

ಅಕಾಡೆಮಿ ಆಫ್​ ಮೋಷನ್​ ಆರ್ಟ್ಸ್​ ಅಂಡ್​ ಸೈನ್ಸಸ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ 96ನೇ ಆವೃತ್ತಿಯ ದಿನಾಂಕವನ್ನು ಈಗಾಗಲೆ ಪ್ರಕಟಿಸಿದೆ. ಚಿತ್ರೋದ್ಯಮಕ್ಕೆ ನೀಡಲಾಗುವ ಅತ್ಯುತ್ತಮ ಪ್ರಶಸ್ತಿಯಾದ ಆಸ್ಕರ್ ಸಮಾರಂಭ 2024ರ ಮಾರ್ಚ್​ 10 ರಂದು ಅದ್ದೂರಿಯಾಗಿ ಜರುಗಲಿದೆ.

ಆಸ್ಕರ್​ ಸಮಾರಂಭವು ಲಾಸ್​ ಏಂಜಲೀಸ್​ನ ಡಾಲ್ಫಿ ಥಿಯೇಟರ್​ನಲ್ಲಿ ನಡೆಯಲಿದೆ. ಕಾರ್ಯಕ್ರಮವೂ ಎಬಿಸಿ ಸೇರಿದಂತೆ 200 ಕ್ಕೂ ಹೆಚ್ಚು ಫ್ಲಾಟ್​ಫಾರ್ಮ್​ಗಳಲ್ಲಿ ನೇರಪ್ರಸಾರವಾಗಲಿದೆ.

2024ರ ಆಸ್ಕರ್​ ಪ್ರಶಸ್ತಿಯ ಪ್ರಮುಖ ದಿನಾಂಕಗಳು:

ಸಾಮಾನ್ಯ ವಿಭಾಗಗಳ ಸಲ್ಲಿಕೆ ಗಡುವು: ನವೆಂಬರ್​ 15, 2023
ಗವರ್ನರ್ ಪ್ರಶಸ್ತಿಗಳು: ನವೆಂಬರ್ 18, 2023
ಪೂರ್ವಭಾವಿ ಮತದಾನ ಪ್ರಾರಂಭ: ಡಿಸೆಂಬರ್​ 18, 2023
ಪೂರ್ವಭಾವಿ ಮತದಾನ ಕೊನೆಗೊಳ್ಳುವುದು: ಡಿಸೆಂಬರ್​ 21, 2023
ಆಸ್ಕರ್​ ತಾತ್ಕಾಲಿಕ ಪಟ್ಟಿಯ ಪ್ರಕಟಣೆ: ಡಿಸೆಂಬರ್​ 21, 2023
ಅರ್ಹತೆಯ ಅವಧಿಯು ಕೊನೆಗೊಳ್ಳುವುದು: ಡಿಸೆಂಬರ್ 31,2023
ನಾಮನಿರ್ದೇಶನಗಳ ಮತದಾನ ಪ್ರಾರಂಭ: ಜನವರಿ 11,2024
ನಾಮನಿರ್ದೇಶನಗಳ ಮತದಾನ ಕೊನೆಗೊಳ್ಳುವುದು: ಜನವರಿ 11, 2024
ಆಸ್ಕರ್ ನಾಮನಿರ್ದೇಶನಗಳ ಪ್ರಕಟಣೆ: ಜನವರಿ 23, 2024
ಆಸ್ಕರ್​ ನಾಮನಿರ್ದೇಶಿತರ ಹೆಸರು ಘೋಷಣೆ: ಫೆಬ್ರವರಿ 12, 2024
ಕೊನೆಯ ಮತದಾನ ಪ್ರಾರಂಭ: ಫೆಬ್ರವರಿ 22, 2024
ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಶಸ್ತಿಗಳು: ಫೆಬ್ರವರಿ 23, 2024
ಫೈನಲ್​ ಮತದಾನ ಕೊನೆಗೊಳ್ಳುವುದು: ಫೆಬ್ರವರಿ 27, 2024
96ನೇ ಆಸ್ಕರ್​ ಪ್ರಶಸ್ತಿ ಸಮಾರಂಭ: ಮಾರ್ಚ್​ 10, 2024

ಸೂಚನೆ: ಅಕಾಡೆಮಿಯ ಪ್ರಕಾರ, “96 ನೇ ಅಕಾಡೆಮಿ ಪ್ರಶಸ್ತಿಗಳ ಎಲ್ಲಾ ದಿನಾಂಕಗಳು ಬದಲಾವಣೆಗೆ ಒಳಪಟ್ಟಿರುತ್ತವೆ.”

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!