October 9, 2026
Friday, October 9, 2026
spot_img

ನಮ್ಮ ಕನ್ನಡದ ಹುಡುಗಿ ರುಕ್ಮಿಣಿ ಇಷ್ಟೊಂದು ಬೋಲ್ಡ್ ಪಾತ್ರ ಮಾಡಬಾರದಿತ್ತು! ನಟಿ ಅವತಾರ ನೋಡೋಕಾಗ್ತಿಲ್ಲ ಎಂದ ಫ್ಯಾನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರುಕ್ಮಿಣಿ ವಸಂತ್‌ ಎಂದರೆ ಕನ್ನಡಿಗರಿಗೆ ಎಲ್ಲಿಲ್ಲದ ಪ್ರೀತಿ. ರುಕ್ಮಿಣಿ ಈವರೆಗೂ ಕನ್ನಡ ಸಿನಿಮಾಗಳಲ್ಲಿ ಮಾಡಿರುವ ಪಾತ್ರಗಳು ಕನ್ನಡಿಗರ ಹೃದಯದಲ್ಲಿಯೇ ಉಳಿದುಕೊಂಡಿವೆ. ನಮ್ಮ ಮನೆಯ ಹುಡುಗಿ ಎನ್ನುವ ವೈಬ್‌ ಕೊಡುವ ರುಕ್ಮಿಣಿಯನ್ನು ಬೋಲ್ಡ್‌ ಅವತಾರದಲ್ಲಿ ನೋಡೋದು ತುಂಬಾ ಕಷ್ಟ ಎಂದು ಫ್ಯಾನ್ಸ್‌ ಹೇಳ್ತಿದ್ದಾರೆ.

ರೀಸೆಂಟ್‌ ಆಗಿ ಹಿಟ್‌ ಆದ ಸಪ್ತ ಸಾಗರದಾಚೆ ಎಲ್ಲೋ, ಕಾಂತಾರ ಚಾಪ್ಟರ್‌ ಒನ್‌ನಲ್ಲಿ ರುಕ್ಮಿಣಿ ಸೀರೆಯುಟ್ಟಿ, ಎಥ್ನಿಕ್‌ ಬಟ್ಟೆಗಳಲ್ಲಿ ಮುದ್ದಾಗಿ ಕಾಣಿಸಿದ್ದಾರೆ. ಆದರೆ ಈಗಷ್ಟೇ ರಿಲೀಸ್‌ ಆಗಿರುವ ಟಾಕ್ಸಿಕ್‌ ಸಿನಿಮಾದಲ್ಲಿ ರುಕ್ಮಿಣಿ ಮೆಲಿಸಾ ಆಗಿ ಬೋಲ್ಡ್‌ ಅವತಾರ ತಾಳಿದ್ದಾರೆ. ಇದನ್ನು ಅರಗಿಸಿಕೊಳ್ಳೋಕೆ ಕನ್ನಡದ ಅಭಿಮಾನಿಗಳಿಗೆ ಕಷ್ಟವಾಗಿದೆಯಂತೆ!

ರುಕ್ಮಿಣಿ ವಸಂತ್‌ ಬೆಡ್‌ ಸೀನ್‌ ಒಂದರಲ್ಲಿ ಕಾಣಿಸಿಕೊಂಡಿದ್ದಕ್ಕೆ ಟ್ರೋಲ್‌ ಆಗ್ತಿದ್ದಾರೆ. ನಟಿಯನ್ನು ಹೀಗೆಲ್ಲಾ ಇಮ್ಯಾಜಿನ್‌ ಮಾಡೋದೇ ಕಷ್ಟ. ಇಷ್ಟು ಬೋಲ್ಡ್‌ ಸೀನ್‌ಗೆ ಅವರು ಒಪ್ಪಿಕೊಳ್ಳಬಾರದಿತ್ತು ಎಂದು ಫ್ಯಾನ್ಸ್‌ ಹೇಳ್ತಿದ್ದಾರೆ. ಆದರೆ ರುಕ್ಮಿಣಿ ಸಪೋರ್ಟರ್ಸ್‌ ಈ ಸಿನಿಮಾ ಸರಿಯಾಗಿ ನೋಡಿದ್ದೀರಾ? ಇದರಲ್ಲಿ ರುಕ್ಮಿಣಿ ಹಾಗೂ ಯಶ್‌ ನಡುವೆ ಒಂದು ಕಿಸ್ಸಿಂಗ್‌ ಸೀನ್‌ ಕೂಡ ಇಲ್ಲ. ಸಿನಿಮಾ ಸ್ಕ್ರಿಪ್ಟ್‌ಗೆ ಏನು ಬೇಕು ಅದನ್ನು ಮಾತ್ರ ಮಾಡಲಾಗಿದೆ. ನಮ್ಮ ಕನ್ನಡದ ನಟಿ ಬಗ್ಗೆ ಅಪಪ್ರಚಾರ ಬೇಡ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಕೆಲ ಸೀನ್‌ಗಳ ಫೋಟೊಗಳನ್ನು ಫ್ಯಾನ್ಸ್‌ ಅಪ್‌ಲೋಡ್‌ ಮಾಡಿಕೊಂಡಿದ್ದಾರೆ. ಇದರಲ್ಲಿ ನಟಿ ರುಕ್ಮಿಣಿ ಬೆಡ್‌ನಿಂದ ಏಳುತ್ತಿರುವುದು, ಮೈಗೆ ಬೆಡ್‌ಶೀಟ್‌ ಸುತ್ತಿಕೊಂಡಿರುವ ದೃಶ್ಯ ಕೂಡ ಇದೆ. ಇದೊಂದೇ ಫೋಟೊ ಇಟ್ಟುಕೊಂಡು ತರಹೇವಾರಿ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಪರ ವಿರೋಧ ಬಿಸಿಬಿಸಿ ಚರ್ಚೆ ಆರಂಭವಾಗಿದೆ.

Must Read