May 16, 2026
Saturday, May 16, 2026
spot_img

ಅತಿ ವೇಗವಾಗಿ ಕಾರ್‌ ಓಡಿಸಿ ಮರಕ್ಕೆ ಡಿಕ್ಕಿ ಹೊಡೆಸಿದ ಡ್ರೈವರ್‌: ಸ್ಥಳದಲ್ಲೇ ಇಬ್ಬರ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅತೀ ವೇಗದ ಚಾಲನೆಯಿಂದ ಕಾರೊಂದು ಮರಕ್ಕೆ ಡಿಕ್ಕಿಯಾಗಿದ್ದು, ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿಯ ಕರ್ಕಾ ಕ್ರಾಸ್‌ ಬಳಿ ನಡೆದಿದೆ.

ಅಜಂಗಾವ ಬಳಿ ವೇಗವಾದ ಬರುತ್ತಿದ್ದ ಕಾರು ಸೀದ ಮರಕ್ಕೆ ಡಿಕ್ಕಿಯಾಗಿದೆ. ರಭಸದಿಂದ ಕಾರು ನಜ್ಜುಗುಜ್ಜಾಗಿದೆ. ಧಾರವಾಡದ ಫಾರೂಕ್‌ ಸಾಬ್‌ ಹಾಗೂ ಹಳಿಯಾಳದ ಮದಸ್ಸಿರ್‌ ಇಸ್ಮಾಯಿಲ್‌ ಮೃತರು.

ದಾಂಡೇಲಿಯಿಂದ ಹಳಿಯಾಳಕ್ಕೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ಎರಡು ಮರಗಳ ಮಧ್ಯ ನುಗ್ಗಿರುವ ಕಾರಿನಿಂದ ಮೃತದೇಹಗಳನ್ನು ತೆಗೆಯಲು ಹರಸಾಹರ ಪಡಲಾಗಿದೆ. ಸದ್ಯ ಮೃತದೇಹಗಳನ್ನು ಹಳಿಯಾಳದ ಆಸ್ಪತ್ರೆಗೆ ರವಾನಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !