ರಾಷ್ಟ್ರೀಯ ನಾಯಕರ ಭಾಷಣ ಮುದ್ರಿಸಿ ಹಂಚಿದ್ದಕ್ಕಾಗಿ ಜೈಲು ಸೇರಿದ್ದರು ಗೋಪಾಲನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಿ.ಗೋಪಾಲನ್ ಅವರು 22 ಜುಲೈ 1922 ರಂದು ಕೇರಳದ0 ಕಣ್ಣೂರಿನ ಅಝಿಕೋಡ್‌ನಲ್ಲಿ ಜನಿಸಿದರು.ಇಎಸ್‌ಎಲ್‌ಸಿ  ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಶಾಲಾ ದಿನಗಳಲ್ಲಿ ಕಾಂಗ್ರೆಸ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರು ವೈಯಕ್ತಿಕ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ರಾಷ್ಟ್ರೀಯ ನಾಯಕರ ಭಾಷಣಗಳನ್ನು ಮುದ್ರಿಸಿ ಹಂಚಿದ್ದಕ್ಕಾಗಿ ಅವರು ನಲವತ್ತು ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದರು. ಬಳ್ಳೇರಿ ಜೈಲಿನಲ್ಲಿ ಹನ್ನೊಂದು ದಿನಗಳ ಸತ್ಯಾಗ್ರಹವನ್ನು ಕೈಗೊಂಡಿದ್ದಕ್ಕಾಗಿ ಅವರ ಸೆರೆವಾಸದ ಅವಧಿಯನ್ನು ಮೂರು ತಿಂಗಳಿಗೆ ಹೆಚ್ಚಿಸಲಾಯಿತು. ಆ ಬಳಿಕ ಗೋಪಾಲನ್ ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾಗವಹಿಸಿ ಎರಡು ತಿಂಗಳು ವೆಲ್ಲೂರ್ ಜೈಲು ಶಿಬಿರದಲ್ಲಿ ಮತ್ತು ಹದಿನೆಂಟು ತಿಂಗಳು ಅಲಿಪುರ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು. ಅವರು ಅನೇಕ ಟ್ರೇಡ್ ಯೂನಿಯನ್ ಮುಷ್ಕರಗಳನ್ನು ಮುನ್ನಡೆಸಿದರು. 1960 ರಲ್ಲಿ ಅವರು ಕೇರಳ ವಿಧಾನಸಭೆಯ ಸದಸ್ಯರಾದರು. ಅವರು 21 ಮೇ 1969 ರಂದು ಕಾರು ಅಪಘಾತದಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!