Friday, December 9, 2022

Latest Posts

ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಫ್ಯಾಮಿಲಿ ಚಾಲೆಂಜ್, ಇದ್ಯಾವ್ದು ಹೊಸಾ ಚಾಲೆಂಜ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನ ಗುಡ್ ಬೈ ಚಿತ್ರದ ಪ್ರಮೋಷನ್ಸ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಈ ಸಿನಿಮಾ ಕುಟುಂಬ ಕುರಿತಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಚಾಲೆಂಜ್ ಒಂದನ್ನು ನೀಡುತ್ತಿದ್ದಾರೆ.
ಇನ್ಸ್‌ಟಾಗ್ರಾಂನಲ್ಲಿ ತನ್ನ ಕುಟುಂಬದ ಜೊತೆಗಿನ ಫೋಟೊ ಶೇರ್ ಮಾಡಿ, ಇದು ನನ್ನ ರಿಯಲ್ ಫ್ಯಾಮಿಲಿ, ಇನ್ನು ಮೂರು ದಿನದಲ್ಲಿ ನನ್ನ ರೀಲ್ ಫ್ಯಾಮಿಲಿ ನಿಮ್ಮ ಮುಂದೆ ಬರಲಿದೆ. ಅದನ್ನು ಹಾರೈಸಿ, ನೀವು ನಿಮ್ಮ ಫ್ಯಾಮಿಲಿ ಜೊತೆಗಿನ ಫೋಟೊಗಳನ್ನು ಅಪ್‌ಲೋಡ್ ಮಾಡಿ ಎಂದು ತನ್ನ ಸ್ನೇಹಿತರನ್ನು ಟ್ಯಾಗ್ ಮಾಡಿದ್ದಾರೆ.
ಈ ಚಾಲೆಂಜ್ ಇದೀಗ ವೈರಲ್ ಆಗಿದ್ದು, ಎಲ್ಲರೂ ತಮ್ಮ ಫ್ಯಾಮಿಲಿ ಫೋಟೊ ಹಾಕಿ, ಬೇರೆಯವರನ್ನು ನಾಮಿನೇಟ್ ಮಾಡುತ್ತಿದ್ದಾರೆ. ಸಿನಿಮಾ ಪ್ರಮೋಷನ್‌ಗಾಗಿ ರಶ್ಮಿಕಾ ವಿಭಿನ್ನ ದಾರಿ ಆರಿಸಿದ್ದು, ಗುಡ್‌ಬೈ ಫೇಮಸ್ ಆಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!