ಪದ್ಮಶ್ರೀ ಇಬ್ರಾಹಿಂ ಸುತಾರರು ಒಬ್ಬ ಅನುಭಾವಿ ಸಂತ: ತಿಪಟೂರು ಶ್ರೀ

ಹೊಸದಿಗಂತ ವರದಿ,ತುಮಕೂರು:

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಪದ್ಮಶ್ರೀ ಪುರಸ್ಕøತರಾದ ಇಬ್ರಾಹಿಂ ಸುತಾರರವರ ಅಗಲಿಕೆಗೆ ತಿಪಟೂರು ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡದ ಕಬೀರರೆಂದೇ ಖ್ಯಾತರಾಗಿದ್ದ ಶರಣರ ಮತ್ತು ಸೂಫಿ ಸಂತರ ಚಿಂತನೆಗಳಿಂದ ಪ್ರಭಾವಿತರಾಗಿ ನಾಡಿನಾದ್ಯಂತ ಸಂಚರಿಸಿ ತಮ್ಮ ವಿಶೇಷ ಪ್ರವಚನಗಳ ಮೂಲಕ ಸಮಾಜದಲ್ಲಿ ಭಾವೈಕ್ಯತೆ ಮೂಡಿಸುವಲ್ಲಿ ತಮ್ಮದೇ ಆದ ಕೊಡುಗೆ ಸಲ್ಲಿಸಿದ್ದ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಪದ್ಮಶ್ರೀ ಪುರಸ್ಕೃತರಾದ
ಇಬ್ರಾಹಿಂ ಸುತಾರರು ಕೇವಲ ಪ್ರವಚನಕಾರರಾಗಿರದೆ ಒಬ್ಬ ಅನುಭಾವಿ ಸಾತ್ವಿಕ ಸಂತರಂತೆಯೇ ಬದುಕಿದ್ದವರು, 2011ರಲ್ಲಿ ಕಲ್ಪತರು ನಾಡಾದ ತಿಪಟೂರಿಗೆ ಆಗಮಿಸಿ ಸಿಡ್ಲೇಹಳ್ಳಿ ಮಠದ ಹಿರಿಯ ಲಿಂಗೈಕ್ಯ ಜಗದ್ಗುರುಗಳ 101ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗುರುಕುಲದ ಗೌರವ ಪ್ರಶಸ್ತಿ ಸ್ವೀಕರಿಸಿ ಅದ್ಭುತವಾದ ಸಾಮರಸ್ಯದಿಂದ ಕೂಡಿದ ಪ್ರವಚನ ನೀಡಿದ್ದನ್ನು ಸ್ಮರಿಸಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!