July 22, 2026
Wednesday, July 22, 2026
spot_img
Home Blog Page 5

ವಿದ್ಯಾರ್ಥಿಗಳಿಗೆ ನ್ಯಾಯ ಬೇಕು: ಪ್ರತಿಭಟನೆ ಬೆನ್ನಲ್ಲೇ ಜನ್ಮದಿನ ಆಚರಿಸಲು ನಿರಾಕರಿಸಿದ ಮಲ್ಲಿಕಾರ್ಜುನ ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮ ಕೈಗೊಂಡಿರುವುದನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ತಮ್ಮ ಜನ್ಮದಿನವನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.

ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವ ಬದಲು ಬಲಪ್ರಯೋಗ ನಡೆಸಿರುವುದು ನೋವು ತಂದಿದೆ ಎಂದು ಅವರು ಹೇಳಿದ್ದಾರೆ.

‘ಇದು ಸಂಭ್ರಮದ ದಿನವಲ್ಲ’

ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹಂಚಿಕೊಂಡಿರುವ ಖರ್ಗೆ, ದೇಶದಲ್ಲಿ ವಿದ್ಯಾರ್ಥಿಗಳ ಧ್ವನಿಯನ್ನು ದಮನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಭ್ರಮ ಆಚರಿಸುವ ಬದಲು ಪ್ರಜಾಪ್ರಭುತ್ವ ಮತ್ತು ಹೊಣೆಗಾರಿಕೆಯ ಬಗ್ಗೆ ಪ್ರಶ್ನಿಸುವ ಸಮಯ ಇದಾಗಿದೆ ಎಂದು ಹೇಳಿದ್ದಾರೆ.

ಸರ್ಕಾರಕ್ಕೆ ಹಲವು ಪ್ರಶ್ನೆಗಳು

ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಲಾಠಿಚಾರ್ಜ್, ಅಶ್ರುವಾಯು ಬಳಕೆ, ಸಂಸತ್ ಪ್ರದೇಶದಲ್ಲಿ ನಿರ್ಬಂಧ ಹಾಗೂ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಿರುವ ಕುರಿತು ಸರ್ಕಾರ ಉತ್ತರ ನೀಡಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:

ಸಂಸತ್‌ನಲ್ಲಿ ಚರ್ಚೆ, ಸಚಿವರ ರಾಜೀನಾಮೆಗೆ ಒತ್ತಾಯ

ನೀಟ್ ಸೇರಿದಂತೆ ಪರೀಕ್ಷಾ ಅಕ್ರಮಗಳ ಕುರಿತು ಸಂಸತ್‌ನಲ್ಲಿ ಸಮಗ್ರ ಚರ್ಚೆ ನಡೆಸಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ. ಈ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

ವಿದ್ಯಾರ್ಥಿ ಕೇಂದ್ರಿತ ಪರೀಕ್ಷಾ ವ್ಯವಸ್ಥೆಗೆ ಆಗ್ರಹ

ಭವಿಷ್ಯದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ಸುರಕ್ಷಿತ ಮತ್ತು ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಜಾರಿಯಾಗಬೇಕು ಎಂದು ಖರ್ಗೆ ತಿಳಿಸಿದ್ದಾರೆ. ಪರೀಕ್ಷಾ ಗೊಂದಲಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಮರುಪರೀಕ್ಷೆ ಮತ್ತು ಸೂಕ್ತ ಪರಿಹಾರ ನೀಡುವ ವ್ಯವಸ್ಥೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮದುವೆ ಇನ್ವಿಟೇಷನ್‌ ಕಾರ್ಡ್‌ ಲಿಂಕ್‌ ಒತ್ತಿ ಒಂಬತ್ತ ಲಕ್ಷ ರೂಪಾಯಿ ಕಳೆದುಕೊಂಡ ಸರ್ಕಾರಿ ಅಧಿಕಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಾಟ್ಸಪ್‌ಗೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದೆ ಎಂದು ತೆರೆಯಲು ಹೋಗುವ ಮುನ್ನ ಎಚ್ಚರವಾಗಿರಿ. ಮದುವೆ ಆಹ್ವಾನ ಪತ್ರಿಕೆ ಬಂದಿದೆ ಎಂದು ನಂಬಿ ಫೈಲ್ ಓಪನ್ ಮಾಡಿದ ಸರ್ಕಾರಿ ಅಧಿಕಾರಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಸುಮಾರು 9.96 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಸೈಬರ್ ವಂಚಕರು ಜನರನ್ನು ಮೋಸಗೊಳಿಸಲು ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ವಾಟ್ಸಪ್‌ಗೆ ಬರುವ ಅಪರಿಚಿತ ಲಿಂಕ್‌ ಅಥವಾ ಫೈಲ್‌ಗಳನ್ನು ಕ್ಲಿಕ್‌ ಮಾಡಿ ಹಣ ಕಳೆದುಕೊಂಡ ಘಟನೆಗಳು ಆಗಾಗ ಕೇಳಿಬರುತ್ತಲೇ ಇವೆ. ಇದೀಗ ಅದೇ ರೀತಿಯಲ್ಲಿ ವಾಟ್ಸಪ್‌ನಲ್ಲಿ ಮದುವೆ ಆಹ್ವಾನದ ಹೆಸರಿನಲ್ಲಿ APK ಫೈಲ್ ಕಳುಹಿಸಿ ಸರ್ಕಾರಿ ಅಧಿಕಾರಿಯೊಬ್ಬರಿಗೆ ಸುಮಾರು 9.96 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರಮೇಶ್ ಬಾಬು ಅವರಿಗೆ ಜುಲೈ 14ರಂದು ಸಂಜೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಪ್‌ನಲ್ಲಿ ಮದುವೆ ಆಹ್ವಾನದ ಸಂದೇಶ ಬಂದಿದೆ. ಸ್ನೇಹಿತ ಅಥವಾ ಪರಿಚಿತರದ್ದಿರಬಹುದು ಎಂದು ಭಾವಿಸಿ ಅವರು ಆ ಫೈಲ್ ಅನ್ನು ಮಾಡಿದ್ದಾರೆ. ಫೈಲ್ ಓಪನ್ ಮಾಡಿದ ಬಳಿಕ ಅದು APK ಫೈಲ್ ಎಂಬುದು ಗೊತ್ತಾಗಿದೆ. ಆಗ ಅದನ್ನು ಹೆಚ್ಚಿನ ಗಮನ ಕೊಡದೆ ಬಿಟ್ಟಿದ್ದಾರೆ. ಆದರೆ 15 ನಿಮಿಷಗಳಲ್ಲಿ ಅವರ ಮೊಬೈಲ್‌ಗೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿರುವ ಸಂದೇಶಗಳು ಬರಲು ಆರಂಭಿಸಿವೆ.

Relationship Tips | ದಾಂಪತ್ಯ ಬಾಂಧವ್ಯ ಗಟ್ಟಿಯಾಗ್ಬೇಕಾ? ಹಾಗಾದ್ರೆ ‘ಪಿಲ್ಲೋ ಟಾಕ್’ ಶುರುಮಾಡಿ

ದಾಂಪತ್ಯ ಜೀವನದಲ್ಲಿ ಪ್ರೀತಿ, ನಂಬಿಕೆ ಮತ್ತು ಉತ್ತಮ ಸಂವಹನವೇ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಮುಖ ಅಂಶ. ದಿನವಿಡೀ ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿಗಳು ಮತ್ತು ಬ್ಯುಸಿ ಜೀವನದ ನಡುವೆ ಗಂಡ-ಹೆಂಡತಿ ಮನಬಿಚ್ಚಿ ಮಾತನಾಡಲು ಸಮಯವೇ ಸಿಗದಿರುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸಂಬಂಧ ತಜ್ಞರು ಹೆಚ್ಚಾಗಿ ಶಿಫಾರಸು ಮಾಡುವ ಅಭ್ಯಾಸವೇ ‘ಪಿಲ್ಲೋ ಟಾಕ್’ (Pillow Talk).

‘ಪಿಲ್ಲೋ ಟಾಕ್’ ಎಂದರೇನು?

‘ಪಿಲ್ಲೋ ಟಾಕ್’ ಎಂದರೆ ಮಲಗುವ ಮುನ್ನ ಅಥವಾ ವಿಶ್ರಾಂತಿ ಪಡೆಯುವ ಸಮಯದಲ್ಲಿ ದಂಪತಿಗಳು ಯಾವುದೇ ಒತ್ತಡವಿಲ್ಲದೆ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವುದು. ಇದು ಕೇವಲ ದಿನದ ಘಟನೆಗಳ ಬಗ್ಗೆ ಮಾತನಾಡುವುದಲ್ಲ; ಭಾವನೆಗಳು, ಕನಸುಗಳು, ಭವಿಷ್ಯದ ಯೋಜನೆಗಳು, ಸಂತೋಷ, ಆತಂಕ ಮತ್ತು ಪರಸ್ಪರ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಮಯವೂ ಹೌದು.

ಸಂಬಂಧವನ್ನು ಗಟ್ಟಿಗೊಳಿಸುವ ಸಂಭಾಷಣೆ

ದಿನದ ಕೊನೆಯಲ್ಲಿ ಕೆಲವೇ ನಿಮಿಷಗಳ ಕಾಲ ಶಾಂತವಾಗಿ ಮಾತನಾಡುವುದರಿಂದ ಇಬ್ಬರ ನಡುವಿನ ಭಾವನಾತ್ಮಕ ನಂಟು ಮತ್ತಷ್ಟು ಗಟ್ಟಿಯಾಗುತ್ತದೆ. ಪರಸ್ಪರ ಅರ್ಥ ಮಾಡಿಕೊಳ್ಳುವ ಗುಣ ಹೆಚ್ಚುವುದರ ಜೊತೆಗೆ ಸಣ್ಣ-ಪುಟ್ಟ ತಪ್ಪು ತಿಳುವಳಿಕೆಗಳು ಕಡಿಮೆಯಾಗುತ್ತವೆ.

ಒತ್ತಡ ಕಡಿಮೆ ಮಾಡಲು ಸಹಕಾರಿ

ಕೆಲಸದ ಒತ್ತಡ ಅಥವಾ ದಿನವಿಡೀ ಎದುರಾದ ಸಮಸ್ಯೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇದರಿಂದ ಆತಂಕ ಕಡಿಮೆಯಾಗಿ, ಉತ್ತಮ ನಿದ್ರೆಯೂ ಬರಲು ಸಹಾಯವಾಗಬಹುದು.

ಇದನ್ನೂ ಓದಿ:

ನಂಬಿಕೆ ಮತ್ತು ಆತ್ಮೀಯತೆ ಹೆಚ್ಚಿಸುತ್ತದೆ

ಮನಸ್ಸಿನ ಮಾತುಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅಭ್ಯಾಸ ದಂಪತಿಗಳ ನಡುವೆ ನಂಬಿಕೆಯನ್ನು ಬೆಳೆಸುತ್ತದೆ. ಇದರಿಂದ ಸಂಬಂಧದಲ್ಲಿ ಭದ್ರತೆ ಮತ್ತು ಆತ್ಮೀಯತೆ ಹೆಚ್ಚುತ್ತದೆ.

ಜಗಳಗಳನ್ನು ಕಡಿಮೆ ಮಾಡಬಹುದು

ಕೋಪ ಅಥವಾ ಅಸಮಾಧಾನವನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುವ ಬದಲು ಶಾಂತವಾಗಿ ಮಾತನಾಡುವುದರಿಂದ ಅನೇಕ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತವೆ. ಸರಿಯಾದ ಸಂವಹನವೇ ಆರೋಗ್ಯಕರ ದಾಂಪತ್ಯದ ಮೂಲಾಧಾರವಾಗಿದೆ.

ಗಮನದಲ್ಲಿರಲಿ

‘ಪಿಲ್ಲೋ ಟಾಕ್’ ಎಂದರೆ ಜಗಳ, ಆರೋಪ ಅಥವಾ ವಾದ-ವಿವಾದ ಮಾಡುವ ಸಮಯವಲ್ಲ. ಇದು ಒಬ್ಬರನ್ನೊಬ್ಬರು ಆಲಿಸುವ, ಅರ್ಥಮಾಡಿಕೊಳ್ಳುವ ಮತ್ತು ಭಾವನಾತ್ಮಕವಾಗಿ ಇನ್ನಷ್ಟು ಹತ್ತಿರವಾಗುವ ಕ್ಷಣ. ಪ್ರತಿದಿನ ಕೆಲವೇ ನಿಮಿಷಗಳ ಈ ಅಭ್ಯಾಸ ದಾಂಪತ್ಯ ಜೀವನವನ್ನು ಹೆಚ್ಚು ಸಂತೋಷಕರ ಮತ್ತು ಬಲಿಷ್ಠವಾಗಿಸಲು ನೆರವಾಗಬಹುದು.

ಫ್ಯಾನ್ಸ್‌ಗೆ ಗುಡ್‌ನ್ಯೂಸ್‌ ಕೊಟ್ಟ ಅರಿಜಿತ್‌ ಸಿಂಗ್‌, ಇಮ್ರಾನ್‌ ಹಶ್ಮಿ ಸಿನಿಮಾ ಹಾಡಿನಿಂದ ಕಮ್‌ಬ್ಯಾಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ವರ್ಷದ ಆರಂಭದಲ್ಲಿ ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್‌ ನೀಡಿದ್ದ ಅರಿಜಿತ್‌ ಸಿಂಗ್‌ ಇದೀಗ ಮತ್ತೆ ಮೈಕ್‌ ಹಿಡಿಯೋದಕ್ಕೆ ಸಿದ್ಧರಾಗಿದ್ದಾರೆ. ಇಮ್ರಾನ್ ಹಶ್ಮಿ ಅಭಿನಯದ ಬಹುನಿರೀಕ್ಷಿತ ‘ಆವಾರಾಪನ್ 2’ ಚಿತ್ರದ ವಿಶೇಷ ಹಾಡೊಂದಕ್ಕೆ ಅರಿಜಿತ್ ಸಿಂಗ್ ಧ್ವನಿಯಾಗಿದ್ದಾರೆ.

ನಿವೃತ್ತಿ ಘೋಷಣೆಯ ನಂತರ ಬಿಡುಗಡೆಯಾಗುತ್ತಿರುವ ಅರಿಜಿತ್ ಅವರ ಮೊದಲ ಹಿನ್ನೆಲೆ ಗೀತೆ ಇದಾಗಿದ್ದು, ಈ ಹಾಡು ಇಂದೇ (ಜುಲೈ 21) ಬಿಡುಗಡೆಯಾಗಲಿದೆ. ‘ಆವಾರಾಪನ್ 2’ ಚಿತ್ರವು ‘ವಿಶೇಷ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದಿದೆ. ಅರಿಜಿತ್ ಸಿಂಗ್ ಮತ್ತು ‘ವಿಶೇಷ್ ಫಿಲ್ಮ್ಸ್’ ಬ್ಯಾನರ್ ನಡುವಿನ ಬಾಂಧವ್ಯ ಕಳೆದ 15 ವರ್ಷಗಳಿಂದ ಬೆಳೆದು ಬಂದಿದೆ. ಅರಿಜಿತ್ ಅವರ ಪ್ರತಿಭೆಯನ್ನು ಆರಂಭದಲ್ಲೇ ಗುರುತಿಸಿ, ‘ಮರ್ಡರ್ 2’ ಚಿತ್ರದ ‘ಫಿರ್ ಮೊಹಬ್ಬತ್’ ಹಾಡಿನ ಮೂಲಕ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದೇ ಇದೇ ವಿಶೇಷ್ ಫಿಲ್ಮ್ಸ್.

ಆ ನಂತರ ಈ ಯಶಸ್ವಿ ಕಾಂಬಿನೇಷನ್‌ನಲ್ಲಿ ಸಾಲು ಸಾಲು ಹಿಟ್ ಹಾಡುಗಳು ಮೂಡಿಬಂದಿದ್ದವು. ಮುಸ್ಕುರಾನೆ (‘ಸಿಟಿಲೈಟ್ಸ್’), ಖಾಮೋಶಿಯಾ, ಹಮಾರಿ ಅಧೂರಿ ಕಹಾನಿ ಮುಂತಾದ ಹಿಟ್‌ ಹಾಡುಗಳನ್ನು ಈ ಬ್ಯಾನರ್‌ನಲ್ಲಿ ಅರಿಜಿತ್‌ ಹಾಡಿದ್ದಾರೆ. ಇದೀಗ ‘ಆವಾರಾಪನ್ 2’ ಚಿತ್ರದ ಮೂಲಕ ಈ ಹಿಟ್ ಜುಗಲ್‌ಬಂದಿ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ. ಯಾವ ಸಿನಿಮಾದಿಂದಲಾದ್ರೂ ಬರಲಿ ಒಟ್ಟಾರೆ ಅರಿಜಿತ್‌ ದನಿ ಮತ್ತೆ ಕೇಳಬೇಕು ಎಂದುಕೊಂಡಿದ್ದ ಫ್ಯಾನ್ಸ್‌ ಇದೀಗ ಖುಷಿಪಟ್ಟಿದ್ದಾರೆ. ಅರಿಜಿತ್‌ ಹಾಡಿಗಾಗಿ ಕಾಯ್ತಿದ್ದಾರೆ.

ಬಾಲಿವುಡ್‌ ನಟಿ ತಾರಾ ಸುತಾರಿಯಾ ಜೊತೆ ಯಶ್‌ ರೊಮ್ಯಾನ್ಸ್‌, ಟಾಕ್ಸಿಕ್‌ನ ʼಮನಮೋಹಕʼ ಹಾಡು ರಿಲೀಸ್‌

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್​ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಈಗಾಗಲೇ ಬಿಡುಗಡೆಯಾಗಿ ಕೋಟ್ಯಂತರ ವೀಕ್ಷಣೆಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದ ಬೋಲ್ಡ್ ಅಂಡ್ ರೊಮ್ಯಾಂಟಿಕ್ ‘ತಬಾಹಿ’ ಹಾಡಿನ ಬೆನ್ನಲ್ಲೇ, ಚಿತ್ರತಂಡ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. 

ಈ ಹಾಡಿನಲ್ಲಿ ಯಶ್‌ ಹಾಗೂ ತಾರಾ ಸುತಾರಿಯಾ ನಡುವಿನ ರೊಮ್ಯಾನ್ಸ್‌ ಕಾಣಿಸುತ್ತಿದ್ದು, ಕಥೆಯ ಸಣ್ಣ ಸಣ್ಣ ಹಿಂಟ್‌ನ್ನು ಬಿಟ್ಟುಕೊಡಲಾಗಿದೆ. ತಬಾಹಿ ಹಾಡಿನಲ್ಲಿ ನಟಿ ಕಿಯಾರಾ ಅಡ್ವಾನಿ ಜೊತೆ ರೊಮ್ಯಾನ್ಸ್‌ ಮಾಡ್ತಿದ್ದ ಯಶ್‌ ಹಾಡಿನ ಕೊನೆಯಲ್ಲಿ ತಾರಾ ಸುತಾರಿಯಾ ಜೊತೆ ಕಾಣಿಸಿಕೊಳ್ತಾರೆ. ಈ ಬಾರಿ ಮನಮೋಹಕ ಹಾಡಿನಲ್ಲಿ ನಯನತಾರಾ ಜೊತೆ ಕಾಣಿಸಿಕೊಂಡಿದ್ದಾರೆ. ಮುಂದಿನ ಹಾಡಿನಲ್ಲಿ ನಟಿ ನಯನತಾರಾ ಜೊತೆ ರೊಮ್ಯಾನ್ಸ್‌ ಮಾಡಬಹುದು ಎಂದು ಫ್ಯಾನ್ಸ್‌ ಊಹಿಸಿದ್ದಾರೆ.

‘ಟಾಕ್ಸಿಕ್’ ಚಿತ್ರದ ಮೊದಲ ಹಾಡಿಗೆ ಸ್ಯಾಂಡಲ್‌ವುಡ್‌ನ ಸ್ಟಾರ್ ಲಿರಿಸಿಸ್ಟ್ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದರು. ಈಗ ಮನಮೋಹಕ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ಸಿದ್ದಾರ್ಥ್ ಬಸರೂರ್ ಅವರು ಹಾಡಿದ್ದಾರೆ. ಹಾಡು ಹೇಗಿದೆ ನೀವೇ ನೋಡಿ..

ಪುರುಷರಕಟ್ಟೆ ಪ್ರಕರಣ: ಯುವತಿ ಸಹಿತ ಆರು ಮಂದಿಗೆ ಜಾಮೀನು

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಪುರುಷರಕಟ್ಟೆಯಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಯುವಕರು ದಾಖಲಿಸಿದ್ದ ಪ್ರತಿ ದೂರಿನ ಪ್ರಕರಣದಲ್ಲಿ ಎಫ್‌ಐಆ‌ರ್ ದಾಖಲಾಗಿದ್ದ ಯುವತಿ ಸೇರಿದಂತೆ ಆರು ಮಂದಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಘಟನೆಯ ಸಂಬಂಧ ಯುವತಿಯೊಬ್ಬರು, ಯುವಕನೊಬ್ಬ ಚಾಕು ಹಿಡಿದು ತಂಡದೊಂದಿಗೆ ವಾಹನದಲ್ಲಿ ಬಂದು ತಮ್ಮನ್ನು ಹಿಂಬಾಲಿಸಿ ದಾಳಿ ಮಾಡಲು ಯತ್ನಿಸಿದ್ದಾನೆ ಎಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದಕ್ಕೆ ಪ್ರತಿಯಾಗಿ ಯುವಕರ ತಂಡ ಮತ್ತೊಂದು ದೂರು ದಾಖಲಿಸಿ, ಪ್ರಕರಣದ ನೈಜ ಸಂಗತಿಗಳು ತಿಳಿದಿದ್ದರೂ ಧಾರ್ಮಿಕ ದ್ವೇಷದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಆರೋಪಿಸಿತ್ತು. ಮಾತ್ರವಲ್ಲದೆ, ತಮ್ಮ ದೂರಿನಲ್ಲಿ ಹಿಂದೂ ಸಂಘಟನೆಯ ಮುಖಂಡ ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ಇತರರ ವಿರುದ್ಧವೂ ಆರೋಪ ಮಾಡಲಾಗಿತ್ತು.

ಇದನ್ನೂ ಓದಿ:

ಯುವಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸಂತ್ರಸ್ತ ಯುವತಿ, ಆಕೆಯ ತಂದೆ, ಮುರಳಿಕೃಷ್ಣ ಹಸಂತಡ್ಕ, ಪುರುಷೋತ್ತಮ ಗೌಡ ಮುಂಗ್ಲಿಮನೆ, ಜಯರಾಮ ಡಿ. ಹಾಗೂ ಆನಂದ ಗೌಡ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯವು ಎಲ್ಲಾ ಆರು ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಮಾಧವ ಪೂಜಾರಿ ಹಾಗೂ ರಾಕೇಶ್ ಬಲ್ನಾಡು ವಾದ ಮಂಡಿಸಿದರು.

ಸಂಸತ್‌ನಲ್ಲಿ ಪ್ರತಿಧ್ವನಿಸಿದ ನೀಟ್ ಹಗರಣ: ತುರ್ತು ಚರ್ಚೆಗೆ ಕಾಂಗ್ರೆಸ್ ಆಗ್ರಹ

0

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳು, ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧದ ಪೊಲೀಸ್ ಕ್ರಮದ ಕುರಿತು ಸಂಸತ್‌ನಲ್ಲಿ ತುರ್ತು ಚರ್ಚೆ ನಡೆಸುವಂತೆ ಕಾಂಗ್ರೆಸ್ ಸಂಸದರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತ್ಯೇಕ ನೋಟಿಸ್ ಸಲ್ಲಿಸಿದ್ದಾರೆ.

ಲೋಕಸಭೆಯಲ್ಲಿ ಚರ್ಚೆಗೆ ಒತ್ತಾಯ

ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಕಲಾಪವನ್ನು ಸ್ಥಗಿತಗೊಳಿಸಿ ಈ ವಿಷಯದ ಕುರಿತು ಚರ್ಚೆ ನಡೆಸುವಂತೆ ಆಗ್ರಹಿಸಿದ್ದಾರೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಬೆಳಕಿಗೆ ಬಂದಿದ್ದರೂ, ತಪ್ಪಿತಸ್ಥರ ವಿರುದ್ಧ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳ ಮೇಲಿನ ಕ್ರಮ ಪ್ರಶ್ನೆ

ಸಂಸದ ಮಾಣಿಕ್ಕಂ ಟಾಗೋರ್, ಸಂಸತ್ ಭವನದ ಬಳಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ದೆಹಲಿ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ಕೈಗೊಂಡ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಇಂಟರ್‌ನೆಟ್ ಸ್ಥಗಿತ ಹಾಗೂ ಬಲಪ್ರಯೋಗದ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

ರಾಜ್ಯಸಭೆಯಲ್ಲೂ ನೋಟಿಸ್

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಸಯ್ಯದ್ ನಸೀರ್ ಹುಸೇನ್ ಅವರು ನಿಯಮ 267ರಡಿ ನೋಟಿಸ್ ನೀಡಿ, ನೀಟ್-ಯುಜಿ ಪರೀಕ್ಷೆ ರದ್ದು, ಸಿಬಿಎಸ್‌ಇ ಮೌಲ್ಯಮಾಪನ ವ್ಯವಸ್ಥೆಯ ಸಮಸ್ಯೆಗಳು ಹಾಗೂ ನೇಮಕಾತಿ ಪರೀಕ್ಷೆಗಳ ವೈಫಲ್ಯದ ಬಗ್ಗೆ ತುರ್ತು ಚರ್ಚೆ ನಡೆಸುವಂತೆ ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳ ವಿಶ್ವಾಸಕ್ಕೆ ಧಕ್ಕೆ

ಪರೀಕ್ಷಾ ಅಕ್ರಮಗಳು ಮತ್ತು ನಿರಂತರ ಗೊಂದಲಗಳಿಂದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿದ್ದು, ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸ ಕುಸಿದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸರ್ಕಾರ ಈ ಕುರಿತು ಸಮಗ್ರ ಉತ್ತರ ನೀಡಬೇಕೆಂದು ಒತ್ತಾಯಿಸಿದೆ.

ಭೀಕರ ಪ್ರವಾಹಕ್ಕೆ ಪತರುಗುಟ್ಟಿದ ಅಫ್ಘಾನಿಸ್ತಾನ: 20 ಸಾ*ವು, 100ಕ್ಕೂ ಹೆಚ್ಚು ಮಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದ ಈಶಾನ್ಯ ಭಾಗದ ನೂರಿಸ್ತಾನ್ ಪ್ರಾಂತ್ಯದಲ್ಲಿ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಭಾರೀ ಅನಾಹುತ ಸೃಷ್ಟಿಸಿದೆ. ಈ ದುರಂತದಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರೂನ್ ನಗರಕ್ಕೆ ಹೆಚ್ಚು ಹಾನಿ

ಪ್ರಾಂತ್ಯದ ರಾಜಧಾನಿ ಪರೂನ್ ಪ್ರವಾಹದಿಂದ ತೀವ್ರ ಹಾನಿಗೊಳಗಾಗಿದೆ. ಹಲವು ಮನೆಗಳು, ವ್ಯಾಪಾರ ಮಳಿಗೆಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳು ಜಲಾವೃತಗೊಂಡಿದ್ದು, ನಗರ ಮೇಯರ್ ಹಾಗೂ ಅವರ ಇಬ್ಬರು ಭದ್ರತಾ ಸಿಬ್ಬಂದಿಯೂ ನಾಪತ್ತೆಯಾಗಿದ್ದಾರೆ.

ರಕ್ಷಣಾ ಕಾರ್ಯಕ್ಕೆ ಅಡ್ಡಿಯಾದ ರಸ್ತೆ ಹಾನಿ

ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ರಕ್ಷಣಾ ಸಿಬ್ಬಂದಿಗೆ ಸಂತ್ರಸ್ತ ಪ್ರದೇಶಗಳನ್ನು ತಲುಪಲು ತೊಂದರೆಯಾಗುತ್ತಿದೆ. ಆದರೂ ನಾಪತ್ತೆಯಾದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಇದನ್ನೂ ಓದಿ:

80ಕ್ಕೂ ಹೆಚ್ಚು ಮಂದಿಗೆ ಗಾಯ

ಈ ದುರಂತದಲ್ಲಿ 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರವಾಹದಿಂದ ಭಾರೀ ಆರ್ಥಿಕ ನಷ್ಟವೂ ಸಂಭವಿಸಿರುವುದಾಗಿ ತಾಲಿಬಾನ್ ಆಡಳಿತದ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

ಹವಾಮಾನ ಬದಲಾವಣೆಯ ಪರಿಣಾಮ

ಅಫ್ಘಾನಿಸ್ತಾನವು ಹವಾಮಾನ ಬದಲಾವಣೆಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿರುವ ದೇಶಗಳಲ್ಲಿ ಒಂದಾಗಿದೆ. ಅರಣ್ಯ ನಾಶ ಮತ್ತು ಅತಿಯಾದ ಮಳೆಯಿಂದ ಇಂತಹ ಹಠಾತ್ ಪ್ರವಾಹಗಳ ಪ್ರಮಾಣ ಹೆಚ್ಚುತ್ತಿದ್ದು, ಜೀವಹಾನಿಯ ಅಪಾಯವೂ ಏರಿಕೆಯಾಗುತ್ತಿದೆ.

ಟ್ರ‍್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ : ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ,ಮಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಟ್ರ್ಯಾಕ್ಟರ್‌ನಲ್ಲಿದ್ದ ತಂದೆ ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಿಡಗುಂದಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮುದ್ದೇಬಿಹಾಳ ಕ್ರಾಸ್‌ ಬಳಿ ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಟ್ರ್ಯಾಕ್ಟರ್‌ನಲ್ಲಿ ಕಾರ್ಮಿಕರು ಕಬ್ಬು ಕಟಾವಿಗೆಂದು ಇಂಡಿಯಿಂದ ಮಂಡ್ಯಕ್ಕೆ ತೆರಳುತ್ತಿದ್ದರು. ಸ್ಪೀಡ್ ಬ್ರೇಕರ್ ಇದ್ದ ಹಿನ್ನೆಲೆ ಚಾಲಕ ಟ್ರ್ಯಾಕ್ಟರ್ ನಿಧಾನವಾಗಿ ಚಲಾಯಿಸಿದ್ದಾನೆ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಟ್ರ‍್ಯಾಕ್ಟರ್‌ಗೆ ಗುದ್ದಿದೆ. ಲಾರಿ ಗುದ್ದಿದ ಪರಿಣಾಮ ಟ್ರ್ಯಾಕ್ಟರ್‌ನಲ್ಲಿದ್ದ ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಹಾಗೂ ಮೃತರ ದೇಹ ನಿಡಗುಂದಿ ಆಸ್ಪತ್ರೆಗೆ ರವಾನಿಸಲಾಗಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪೇಪರ್ ಲೀಕ್‌ಗೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಪರೀಕ್ಷಾ ವ್ಯವಸ್ಥೆ ರೂಪಿಸಿ: ಪ್ರಧಾನಿ ಮೋದಿ

0

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳಿಗೆ ಕಾನೂನು ಪ್ರಕಾರ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪರೀಕ್ಷಾ ಅಕ್ರಮಗಳನ್ನು ತಡೆಯುವುದು ದೇಶದ ಸಮೂಹ ಜವಾಬ್ದಾರಿಯಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಭದ್ರ ಪರೀಕ್ಷಾ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದ್ದಾರೆ.

ಪರೀಕ್ಷಾ ವ್ಯವಸ್ಥೆ ಮತ್ತಷ್ಟು ಭದ್ರವಾಗಲಿ

ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸ ಉಳಿಯುವಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ದೃಢ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದಿದ್ದಾರೆ.

ಹಗರಣ ಬೆಳಕಿಗೆ ಬಂದ ತಕ್ಷಣ ಕ್ರಮ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಮಾಹಿತಿ ದೊರೆತ ತಕ್ಷಣವೇ ಸರ್ಕಾರ ತನಿಖೆ ಆರಂಭಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮರುಪರೀಕ್ಷೆಯನ್ನು ಕೂಡ ಶೀಘ್ರದಲ್ಲೇ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಸಂಸತ್‌ನಲ್ಲಿ ಸಹಕಾರಕ್ಕೆ ಮನವಿ

ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ದೇಶದ ಅಭಿವೃದ್ಧಿ ಮತ್ತು ಯುವಕರ ಹಿತಾಸಕ್ತಿಯ ವಿಷಯದಲ್ಲಿ ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ. ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯಲು ವಿರೋಧ ಪಕ್ಷಗಳ ಸಹಕಾರವೂ ಅಗತ್ಯ ಎಂದು ಅವರು ತಿಳಿಸಿದ್ದಾರೆ.

ಪ್ರತಿಭಟನೆ ನಡುವೆ ಪ್ರಧಾನಿ ಹೇಳಿಕೆ

ನೀಟ್ ಪರೀಕ್ಷೆಯ ಅಕ್ರಮಗಳನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ವಿಶ್ವಾಸ ಹೆಚ್ಚಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಮುಂದುವರಿಸಲಿದೆ ಎಂದು ಸಭೆಯಲ್ಲಿ ಪುನರುಚ್ಚರಿಸಲಾಗಿದೆ.

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !