ಹೊಸದಿಗಂತ ಡಿಜಿಟಲ್ ಡೆಸ್ಕ್
ಪಾಕಿಸ್ತಾನದ ಕರಾಚಿಯಲ್ಲಿ ನಡೆಯುತ್ತಿರುವ ದ್ವಿತೀಯ ಪಂದ್ಯದಲ್ಲಿ ಅತಿಥೇಯ ಬೌಲರ್ ಗಳ ಮೇಲೆ ಸವಾರಿ ಮಾಡಿರುವ ಆಸ್ಟೇಲಿಯನ್ನರು ಬೃಹತ್ ಮೊತ್ತ ಕಲೆಹಾಕಿದ್ದಾರೆ. ಎಂಟು ವಿಕೆಟ್ ಗೆ 503 ರನ್ ಗಳಿಂದ ಸೋಮವಾರ ದಿನದಾಟ ಮುಂದುವರೆಸಿದ ಆಸಿಸ್ 9 ವಿಕೆಟ್ ನಷ್ಟಕ್ಕೆ 556 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.
ಆಸಿಸ್ ತಂಡವನ್ನು ಮೂರನೇ ದಿನ ಬೇಗನೇ ಕಟ್ಟಿಹಾಕಿ ಬ್ಯಾಟಿಂಗ್ ಆರಂಭಿಸುವ ಪಾಕ್ ಯೋಜನೆಗೆ ಬಾಲಂಗೋಚಿಗಳು ಅಡ್ಡಿಯಾದರು. ಕೆಳಕ್ರಮಾಂಕದಲ್ಲಿ ಕುಮಿನ್ಸ್ ( 34) ಸ್ಟಾರ್ಕ್(28) ಸ್ವಾಪ್ಸನ್15 ರನ್ ಗಳಿಸಿ ಪಾಕ್ ಬೌಲರ್ ಗಳನ್ನು ಗೋಳುಹೊಯ್ದುಕೊಂಡರು. ಇದಕ್ಕೂ ಮೊದಲು ಉಸ್ಮಾನ್ ಖವಾಜ ಭರ್ಜರಿ ಶತಕ(160) ರನ್ ಕಲೆಹಾಕಿದ್ದರು. ಬೃಹತ್ ಮೊತ್ತ ಬೆನ್ನತ್ತಿರುವ ಪಾಕ್ ಆರಂಭಿಕ ಆಘಾತಕ್ಕೆ ಒಳಗಾಗಿದೆ. 24 ಓವರ್ ಗಳಲ್ಲಿ 52 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಹೈದರ್ ಅಲಿ 14, ಬಾಬರ್ 8 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.