ಅಮೆರಿಕದಲ್ಲಿನ ರಾಯಭಾರಿ ಕಚೇರಿ ಕಟ್ಟಡ ಮಾರಾಟಕ್ಕಿಟ್ಟ ಪಾಕ್:‌ಟಾಪ್‌ ಬಿಡ್‌ಗಳಲ್ಲಿ ಭಾರತಕ್ಕೆ ಸ್ಥಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನಕ್ಕೆ ಸಾಧ್ಯವಾಗದೆ ಇದೀಗ ಅಮೆರಿಕದಲ್ಲಿರುವ ತನ್ನ ರಾಯಭಾರ ಕಚೇರಿ ಕಟ್ಟಡವನ್ನು ಮಾರಾಟಕ್ಕಿಟ್ಟಿದೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಆಸ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ವಾಷಿಂಗ್ಟನ್‌ನಲ್ಲಿ ರಾಯಭಾರಿ ಕಚೇರಿ ಕಟ್ಟಡದ ಮಾರಾಟಕ್ಕೆ ಬಿಡ್‌ಗಳನ್ನು ಆಹ್ವಾನಿಸಲಾಗಿದ್ದು, ಇದುವರೆಗೂ ಮೂರು ಬಿಡ್‌ಗಳನ್ನು ಸಲ್ಲಿಸಲಾಗಿದೆ ಎಂದು ಡಾನ್ ದಿನಪತ್ರಿಕೆ ಬಹಿರಂಗಪಡಿಸಿದೆ.

ಈ ಮೂರು ಬಿಡ್‌ಗಳಲ್ಲಿ, ಒಂದು ಬಿಡ್ ಯಹೂದಿ ಕಂಪನಿ ಮತ್ತು ಇನ್ನೊಂದು ಭಾರತದಿಂದ ರಿಯಲ್ ಎಸ್ಟೇಟ್ ಕಂಪನಿ ಇದೆ. ಪಾಕಿಸ್ತಾನದ ಓರಿಲ್ಡರ್ ಕೂಡ ಬಿಡ್ ಸಲ್ಲಿಸಿದ್ದಾರೆ. ಯಹೂದಿ ಕಂಪನಿಯೊಂದು ರೂ.56 ಕೋಟಿಗೆ ಅತಿ ಹೆಚ್ಚು (6.8 ಮಿಲಿಯನ್ ಡಾಲರ್) ಬಿಡ್ ಮಾಡಿದೆ.

ಭಾರತದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು (5 ಮಿಲಿಯನ್ ಡಾಲರ್) ರೂ.41 ಕೋಟಿಗೆ ಬಿಡ್ ಸಲ್ಲಿಸಿದರೆ, ಪಾಕಿಸ್ತಾನದ ರಿಯಾಲ್ಟರ್ ಭಾರತೀಯ ಕರೆನ್ಸಿಯಲ್ಲಿ ರೂ.33 ಕೋಟಿಗೆ 4 ಮಿಲಿಯನ್ ಡಾಲರ್ ಬಿಡ್‌ ಮಾಡಿದೆ. ಪಾಕಿಸ್ತಾನದ ರಾಜತಾಂತ್ರಿಕ ದಳವು ವಾಷಿಂಗ್ಟನ್‌ನ ಮೂರು ಸ್ಥಳಗಳಲ್ಲಿ ಆಸ್ತಿಯನ್ನು ಹೊಂದಿದೆ. ಅವುಗಳಲ್ಲಿ ಒಂದನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕಾರಿಗಳು ಡಾನ್‌ಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!