ಪಾಕ್‌ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದ ಇಂಗ್ಲೆಂಡ್: ಬಾಬರ್‌ ಸೇನೆಗೆ ತವರಿನಲ್ಲಿ ಕ್ಲೀನ್‌ ಸ್ವಿಪ್‌ ಮುಖಭಂಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬೆನ್‌ ಸ್ಟೋಕ್ಸ್-‌ ಮೆಕಲಮ್‌ ಜುಗಲ್ಬಂದಿಯಲ್ಲಿ ಹೊಸ ವಿಕ್ರಮಗಳನ್ನು ಸಾಧಿಸುತ್ತಿರುವ ಇಂಗ್ಲೆಂಡ್‌ ತಂಡ ಪಾಕ್‌ ನೆಲದಲ್ಲಿ ಟೆಸ್ಟ್‌ ಸರಣಿ ಕ್ಲೀನ್‌ ಸ್ವಿಪ್‌ ಮಾಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಆಂಗ್ಲರ ಪ್ರಚಂಡ ಆಟದೆದುರು ಮಂಕಾದ ಪಾಕಿಗಳು ಮೂರನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಎಂಟು ವಿಕೆಟ್‌ಗಳ ಸೋಲು ಕಾಣುವುದರೊಂದಿಗೆ ತವರಿನಲ್ಲಿ ಭಾರಿ ಮುಖಭಂಗ ಅನುಭವಿಸಿದ್ದಾರೆ.
ಪಂದ್ಯದ 4 ನೇ ದಿನವಾದ ಮಂಗಳವಾರ ಇಂಗ್ಲೆಂಡ್‌ ಗೆಲುವಿಗೆ ಕೇವಲ 55 ರನ್‌ಗಳ ಅಗತ್ಯವಿತ್ತು. ಕೇವಲ  38 ನಿಮಿಷಗಳಲ್ಲಿ ಗೆಲುವಿನ ಔಪಚಾರಿಕತೆ ಪೂರೈಸಿದ ಇಂಗ್ಲೆಂಡ್‌, 17 ವರ್ಷಗಳ ನಂತರ ಪಾಕಿಸ್ತಾನಕ್ಕೆ ಕೈಗೊಂಡ ತನ್ನ ಮೊದಲ ಟೆಸ್ಟ್ ಪ್ರವಾಸದಲ್ಲಿ ದಿಗ್ವಿಜಯ ಸಾಧಿಸಿತು. ಇದು ತವರು ನೆಲದಲ್ಲಿನ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಪಾಕಿಸ್ತಾನಕ್ಕೆ ಮೊದಲ ವೈಟ್‌ ವಾಷ್ ಸೋಲಾಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 304 ರನ್‌ ಗಳಿಗೆ ಸರ್ವಪತನ ಗೊಂಡಿತ್ತು. ನಾಯಕ ಬಾಬರ್‌ ಅಜಂ (75) ಗರಿಷ್ಠ ಮೊತ್ತ ಗಳಿಸಿದ್ದರು. ಇಂಗ್ಲೆಂಡ್‌ ಪರ ಸ್ಪಿನ್ನರ್‌ ಜಾಕ್‌ ಲಿಚ್‌ 4 ವಿಕೆಟ್‌ ಗಳಿಸಿದ್ದರು. ಪ್ರತ್ಯುತ್ತರವಾಗಿ ಬ್ಯಾಟಿಂಗ್‌ ಗೆ ಇಳಿದಿದ್ದ ಇಂಗ್ಲೆಂಡ್‌ 364 ರನ್‌ ಕಲೆಹಾಕಿತ್ತು. ತಂಡದ ಪರ ಹ್ಯಾರಿ ಬ್ರೂಕ್ಸ್‌ 111 ರನ್‌ ಸಿಡಿಸಿದ್ದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ಇಂಗ್ಲೆಂಡ್‌ ನ 18 ವರ್ಷದ ಯಂಗ್ ಸ್ಟಾರ್‌ ಸ್ಪಿನ್ನರ್ ರೆಹಾನ್ ಅಹ್ಮದ್ (5-48) ಮಾರಕ ದಾಳಿಗೆ ಕೇವಲ  216 ರನ್‌ಗಳಿಗೆ ಕುಸಿದು ಇಂಗ್ಲೆಂಡ್‌ಗೆ ಗೆಲುವಿಗೆ 167 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು. ಪಂದ್ಯದ 3 ನೇ ದಿನ 112 ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ಇಂದು ವಿಕೆಟ್‌ ನಷ್ಟವಿಲ್ಲದೆ 170 ರನ್‌ ಕಲೆಹಾಕುವ ಮೂಲಕ ಗೆಲವಿನ ಸಂಭ್ರಮ ಆಚರಿಸಿತು.
ಇಂಗ್ಲೆಂಡ್‌ ಪರ ಬೆನ್ ಡಕೆಟ್ 78 ಎಸೆತಗಳಲ್ಲಿ 82 ರನ್ ಗಳಿಸಿ ಅಜೇಯರಾಗಿ ಉಳಿದರು. ಬೆನ್ ಸ್ಟೋಕ್ಸ್ ಔಟಾಗದೆ 35 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮುನ್ನ
ಇಂಗ್ಲೆಂಡ್ ರಾವಲ್ಪಿಂಡಿಯ ಮೊದಲ ಟೆಸ್ಟ್ ಅನ್ನು 74 ರನ್‌ಗಳಿಂದ, ಮುಲ್ತಾನ್‌ನಲ್ಲಿ 26 ರನ್‌ಗಳಿಂದಚಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!