ಮೋದಿಜಿ, ಪಾಕಿಸ್ತಾನವನ್ನು ದತ್ತು ತೆಗೆದುಕೊಳ್ಳಿ ಪ್ಲೀಸ್: ಪಾಕ್ ಬ್ಲಾಗರ್ ವಿನಂತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸದ್ಯ ಪಾಕಿಸ್ತಾನದ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಆರ್ಥಿಕ ಬಿಕ್ಕಟ್ಟಿನ ಜೊತೆಗೆ ರಾಜಕೀಯ ಬಿಕ್ಕಟ್ಟಿನಿಂದಾಗಿ.. ಅಲ್ಲಿನ ಜನರ ಬದುಕು ದುಸ್ತರವಾಗಿದೆ. ಅಗತ್ಯ ವಸ್ತುಗಳ ಗಗನಕ್ಕೇರಿರುವ ಬೆಲೆಗಳು ಮತ್ತು ಉದ್ಯೋಗ ನಷ್ಟದಿಂದ ಪಾಕಿಸ್ತಾನದ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅವರನ್ನು ಈ ಬಿಕ್ಕಟ್ಟಿನಿಂದ ಪಾರು ಮಾಡುವವರು ಯಾರು? ಎಂದು ಪಾಕಿಸ್ತಾನ ಕಾತರದಿಂದ ಕಾಯುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ದೊಡ್ಡದಾಗಿ ಮಾತನಾಡುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಜನಪ್ರಿಯ ಬ್ಲಾಗರ್ ಹಾಗೂ ಉದ್ಯಮಿ ಇನಯಾ ಭಟ್ ಸೆನ್ಸೇಷನಲ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನವನ್ನು ದತ್ತು ತೆಗೆದುಕೊಳ್ಳುವಂತೆ ಕೋರಿದ್ದಾರೆ. ಅಲ್ಲದೇ.. ಕಾಶ್ಮೀರದ ಅವಿಭಾಜ್ಯ ಅಂಗವಾಗಿರುವ ಜನರು ತುಂಬಾ ಅದೃಷ್ಟವಂತರು, ಏಕೆಂದರೆ ಅವರು ಭಾರತದ ಭೂಪ್ರದೇಶದಲ್ಲಿದ್ದಾರೆ ಎಂದು ಪರೋಕ್ಷವಾಗಿ ಪಾಕಿಸ್ತಾನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇನಯಾ ಭಟ್ ಹೇಳಿದ್ದು…”ಪ್ರಸ್ತುತ ಭಾರತವು ಯುಎಸ್ ಮತ್ತು ಯುಕೆಯಂತೆ ಬೆಳೆಯುತ್ತಿದೆ. ಇದು ಆ ಎರಡು ದೇಶಗಳನ್ನು ಆಳುವ ಮಟ್ಟದಲ್ಲಿದೆ. ದೇಶವು ಜಗತ್ತನ್ನು ಮುನ್ನಡೆಸುವತ್ತ ಹೆಜ್ಜೆ ಹಾಕುತ್ತಿದೆ. ವಾಣಿಜ್ಯ ಮತ್ತು ಐಟಿ ಉತ್ಪಾದನೆಯಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಭಾರತದಂತಹ ದೇಶದ ಭಾಗವಾಗಲು ಕಾಶ್ಮೀರಿಗಳು ನಿಜವಾಗಿಯೂ ಅದೃಷ್ಟವಂತರು. ಆದರೆ… ಪಾಕಿಸ್ತಾನ ಗುಲಾಮಗಿರಿಯಲ್ಲಿ ಮುಳುಗಿದೆ. ಬಿರಿಯಾನಿ ಬೇಯಿಸುವುದು ಹೇಗೆ? ಅದರಲ್ಲಿ ಹೆಚ್ಚು ರುಚಿಕರವಾಗಿರಲು ಏನು ಸೇರಿಸಬೇಕು? ಕಬಾಬ್ ರುಚಿ ಹೆಚ್ಚಿಸಲು ಏನು ಮಾಡಬೇಕು? ಎಂಬುದರ ಬಗ್ಗೆ ಯೋಚಿಸುವುದರಲ್ಲಿ ನಿರತಳಾಗಿದ್ದಾರೆ. ಪಾಕಿಸ್ತಾನದ ಜನರಷ್ಟೇ ಅಲ್ಲ ಇಲ್ಲಿನ ಸರ್ಕಾರವೂ ಬಡವಾಗಿದೆ. ಪಾಕಿಸ್ತಾನದ ಅಧಿಕಾರಿಗಳು ಕಾಶ್ಮೀರ ಸಮಸ್ಯೆಯನ್ನು ಹೊರತುಪಡಿಸಿ ನಾಗರಿಕರ ಬಗ್ಗೆ ಏನೂ ಕಾಳಜಿ ವಹಿಸುವುದಿಲ್ಲ. ಅದಕ್ಕಾಗಿಯೇ ಪ್ರಧಾನಿ ಮೋದಿಯವರೇ ನಮ್ಮನ್ನು ದತ್ತು ತೆಗೆದುಕೊಳ್ಳಿ. ಆಗ ಪಾಕಿಸ್ತಾನಿ ಜನರ ಭವಿಷ್ಯ ಉತ್ತಮವಾಗಿರುತ್ತದೆ,’’ ಎಂದು ಬ್ಲಾಗರ್ ಮನವಿ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ಯದ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಪಾಕಿಸ್ತಾನಿ ಗಾಯಕರು, ಸಾಮಾಜಿಕ ಜಾಲತಾಣಗಳ ಪ್ರಭಾವಿಗಳೂ ಪಾಕ್ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಅಲ್ಲದೇ ಭಾರತ ಸರ್ಕಾರ ಹಾಗೂ ಮೋದಿಯನ್ನು ಹೊಗಳಿ ಪೋಸ್ಟ್ ಗಳನ್ನು ಹಾಕಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!