September 16, 2026
Wednesday, September 16, 2026
spot_img

ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಪಾಕ್‌ ಹಡಗಿನಿಂದ ಭಾರತೀಯ ನೌಕೆಗೆ ಡಿಕ್ಕಿ: ಭಾರತ ಆಕ್ಷೇಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ತಾನದ ಹಡಗೊಂಡು ಡಿಕ್ಕಿ ಹೊಡೆದಿದ್ದು, ಇಸ್ಲಾಮಾಬಾದ್‌ನ ಉನ್ನತ ರಾಯಭಾರಿಗೆ ವಿದೇಶಾಂಗ ಸಚಿವಾಲಯ ಸಮನ್ಸ್‌ ನೀಡಿದೆ. ಹೌದು, ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಪಾಕಿಸ್ತಾನದ ನೌಕಾಪಡೆಯ ಹಡಗು ಭಾರತದ ನೌಕಾಪಡೆಯ ಹಡಗಿಗೆ ಡಿಕ್ಕಿ ಹೊಡೆದಿದೆ. ಇದು ವೃತ್ತಿಪರ ನಡವಳಿಕೆ ಅಲ್ಲ ಎಂದು ಭಾರತ ಹೇಳಿದೆ.

ಡಿಕ್ಕಿಗೆ ಕಾರಣವಾದ ಪಾಕಿಸ್ತಾನಿ ನೌಕಾಪಡೆಯ ಘಟಕಗಳ ಅನ್‌ಅಥೋರೈಸ್ಡ್‌ ಹಾಗೂ ಅನ್‌ಪ್ರೊಫೆಶನಲ್‌ ಬಿಹೇವಿಯರ್‌ನ್ನು ಗಮನಕ್ಕೆ ತರಲು ವಿದೇಶಾಂಗ ಸಚಿವಾಲಯ ಪಾಕಿಸ್ತಾನದ ಹೈಕಮಿಷನ್‌ನ ‘ಚಾರ್ಜ್ ಡಿ ಅಫೇರ್ಸ್’ ಅವರನ್ನು ಕರೆಸಿಕೊಂಡಿದೆ. ಇಲ್ಲಿ ದೊಡ್ಡ ಹಾನಿ ಸಂಭವಿಸದೇ ಇರಬಹುದು, ಆದರೆ ಈ ನಡವಳಿಕೆ ಅಸಮಂಜಸ. ಏಪ್ರಿಲ್ 1991ರ ‘ಸೇನಾ ಕವಾಯತುಗಳು, ತಾಲೀಮುಗಳು ಮತ್ತು ಪಡೆಗಳ ಚಲನವಲನಗಳ ಕುರಿತಾದ ಮುಂಚಿತ ಸೂಚನೆಗೆ ಸಂಬಂಧಿಸಿದ ಭಾರತ-ಪಾಕಿಸ್ತಾನ ಒಪ್ಪಂದದ 10ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು, ಎಲ್ಲಾ ಸೇನಾ ಘಟಕಗಳು ಸೂಕ್ತ ಎಚ್ಚರಿಕೆ ವಹಿಸಬೇಕು ಮತ್ತು ಉಭಯ ದೇಶಗಳ ನಡುವಿನ ಸಂಬಂಧಿತ ಒಪ್ಪಂದಗಳ ನಿಬಂಧನೆಗಳನ್ನು ಗೌರವಿಸಬೇಕು ಎಂದು ಚಾರ್ಜ್ ಡಿ ಅಫೇರ್ಸ್ ಅವರಿಗೆ ಸೂಚನೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !