Saturday, July 2, 2022

Latest Posts

ಮಿತ್ರರಾಷ್ಟ್ರಕ್ಕೆ ಪಾಕ್‌ ಹೊಸ ಸರ್ಕಾರ ಶಾಕ್, ಈ ನಿರ್ಧಾರ ಸರಿಯಲ್ಲ ಎಂದು ಚೀನಾ ಸಿಡಿಮಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಿತ್ರರಾಷ್ಟ್ರ ಚೀನಾಕ್ಕೆ ಪಾಕಿಸ್ತಾನ ಶಾಕ್ ನೀಡಿದೆ. ಪಾಕಿಸ್ತಾನದ ಹೊಸ ಸರ್ಕಾರವು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಪ್ರಾಧಿಕಾರವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಪಾಕಿಸ್ತಾನದ ಹೊಸ ಪ್ರಧಾನಿ ಶೆಹಬಾಬ್ ಷರೀಫ್ ಅವರ ನಿರ್ದೇಶನದಂತೆ, ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ಅವರು ಯೋಜನೆಗಳನ್ನು ಸಂಪನ್ಮೂಲಗಳ ಅನಗತ್ಯ ವ್ಯರ್ಥ ಎಂದು ಬಣ್ಣಿಸಿದ್ದಾರೆ.

ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯ ಮತ್ತು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಗದರ್ ಬಂದರಿನ ನಡುವೆ ಮೂಲಸೌಕರ್ಯ ಮತ್ತು ಇಂಧನ ಯೋಜನೆಯನ್ನು ಸ್ಥಾಪಿಸಲು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು 2019 ರಲ್ಲಿ ಏಜೆನ್ಸಿಯನ್ನು ಸ್ಥಾಪಿಸಿದರು. ಸುಮಾರು ರೂ. 4.5 ಲಕ್ಷ ಕೋಟಿ ಮೊತ್ತದ ಯೋಜನೆಗಳಿಗೆ ಪ್ರಾಧಿಕಾರವನ್ನು ನೇಮಿಸಲಾಗಿದೆ. ಯೋಜನೆಗೆ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಖರ್ಚು ಮಾಡಿರುವುದಾಗಿ ಎಂದು ಚೀನಾ ಹೇಳುತ್ತಿದೆ.

ಚೀನಾದ ವಿದ್ಯುತ್ ಉತ್ಪಾದಕರು ತಮ್ಮ Rs.300 ಶತಕೋಟಿ ಬಾಕಿಯನ್ನು ಕ್ಲಿಯರ್‌ ಮಾಡಿಲ್ಲ. ಜೊತೆಗೆ 1,980 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸ್ಥಗಿತಗೊಳಿಸಿದ್ದಾರೆ. ಈ ವರದಿಗಳ ಆಧಾರದ ಮೇಲೆ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್, ಪ್ರಾಧಿಕಾರವನ್ನು ರದ್ದುಗೊಳಿಸುವ ಪ್ರಕ್ರಿಯೆ ಪ್ರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಗಳನ್ನು ನೀಡಲಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಪಾಕ್ ನಿರ್ಧಾರದಿಂದ ಚೀನಾ ಕೊತ ಕೊತ ಕುದಿಯುತ್ತಿದೆ. ಈ ಯೋಜನೆ ಬಹುತೇಕ ಅರ್ಧದಷ್ಟು ಪೂರ್ಣಗೊಂಡಿದೆ. ಇದೀಗ ಪಾಕಿಸ್ತಾನದ ಹೊಸ ಸರ್ಕಾರ ಇಂತಹ ನಿರ್ಧಾರವನ್ನು ಏಕೆ ತೆಗೆದುಕೊಳ್ಳುತ್ತಿದೆ..? ಎಂದು ಚೀನಾ ಪ್ರಶ್ನೆ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss