ಇದೆಂಥಾ ಸ್ಪರ್ಧೆ ಮಾರಾಯ್ರೇ! ರೊಟ್ಟಿ ಕಾವಲಿಯಿಂದ ಥಳಿಸಿಕೊಳ್ಳುವುದೇ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಂಗೂ ಸ್ಪರ್ದೆ ಇರುತ್ತಾ..ಶಿವಶಿವಾ ಪ್ಯಾನ್‌ ಸ್ಲ್ಯಾಪಿಂಗ್‌ ಸ್ಪರ್ಧೆ ಅಂತೆ ಮಾರ್ರೆ, ಇಬ್ಬರು ವ್ಯಕ್ತಿಗಳು ಎದುರು ಬದುರು ಕುಳಿತುಕೊಂಡು ರೊಟ್ಟಿ ಎಂಚಿನಿಂದ ಥಳಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಇದೆಂಧಾ ಸ್ಪರ್ಧೆ ಎಂದು ನೆಟ್ಟಿಗರು ಕಣ್ಣು-ಬಾಯಿ ಬಿಡುತ್ತಿದ್ದಾರೆ.

ಆ ವಿಚಿತ್ರ ಸ್ಪರ್ಧೆ ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು. ಮಾಜಿ NBA ಆಟಗಾರ ರೆಕ್ಸ್ ಚಾಪ್ಮನ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ಯಾನ್ ಸ್ಲ್ಯಾಪಿಂಗ್ ಸ್ಪರ್ಧೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಲೋಹದ ಹೆಲ್ಮೆಟ್‌ಗಳನ್ನು ಧರಿಸಿ ಪರಸ್ಪರ ತಲೆಗೆ ಹೊಡೆದುಕೊಳ್ಳುತ್ತಿದ್ದಾರೆ. ಈ ವಿಲಕ್ಷಣ ಆಟವನ್ನು ವೀಕ್ಷಿಸಲು ಜನರು ಗುಂಪುಗಟ್ಟಿ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಆಟದಲ್ಲಿ ಯಾರು ಕೆಳಗೆ ಬೀಳುತ್ತಾರೋ ಅವರು ಸೋತಂತೆ.

ಇದು ತಮಾಷೆಗಾಗಿ ಮಾಡಿರುವ ಸ್ಪರ್ಧೆ ಅಲ್ಲವೇ ಅಲ್ಲ. ಹಾಲಿವುಡ್ ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಸ್ಥಾಪಿಸಿದ ಅರ್ನಾಲ್ಡ್ ಕ್ರೀಡಾ ಉತ್ಸವ. ಕಳೆದ ಮಾರ್ಚ್‌ನಲ್ಲಿ “ಸ್ಲ್ಯಾಪ್ ಫೈಟಿಂಗ್ ಚಾಂಪಿಯನ್‌ಶಿಪ್” ಅನ್ನು ಪ್ರಾರಂಭಿಸಿದರು. ಪ್ರತಿ ಸುತ್ತಿನಲ್ಲಿ ಸ್ಪರ್ಧಿಗಳಿಗೆ ಮೂರು ಸುತ್ತು ಇರುತ್ತದೆ. ಒಬ್ಬ ಸ್ಪರ್ಧಿ ಹೊಡೆದ 30 ಸೆಕೆಂಡುಗಳಲ್ಲಿ ಮತ್ತೊಬ್ಬ ಹೊಡೆಯಬೇಕು. ಆಟಗಾರನ ಸಾಮರ್ಥ್ಯದ ಆಧಾರದ ಮೇಲೆ ಮೂವರು ತೀರ್ಪುಗಾರರು ನಾಕೌಟ್ ಸ್ಕೋರ್‌ ನೀಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!