ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ ಶಿಪ್‌ ನಲ್ಲಿ 25 ನೇ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಲೇಷ್ಯಾದ ಕೌಲಾಲಂಪುರ್ ನಲ್ಲಿ ಶನಿವಾರ ನಡೆದ ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತದ ಶ್ರೇಷ್ಠ ಕ್ರೀಡಾತಾರೆ ಪಂಕಜ್ ಅಡ್ವಾಣಿ ದೇಶದವರೇ ಆದ ಸೌರವ್ ಕೊಠಾರಿ ಅವರನ್ನು 4-0 ಅಂತರದಲ್ಲಿ ಸೋಲಿಸಿ 25 ನೇ ವಿಶ್ವ ಪ್ರಶಸ್ತಿಯನ್ನು ಪಡೆದರು.
ಪಂದ್ಯದ ಆರಂಭದಲ್ಲೇ ಮೇಲುಗೈ ಸಾಧಿಸಿದ ಅಡ್ವಾಣಿ, 150 ಪ್ಲಸ್ ಫಾರ್ಮ್ಯಾಟ್‌ನಲ್ಲಿ 149 ರ ಬ್ರೇಕ್‌ನೊಂದಿಗೆ ಮೊದಲ ಫ್ರೇಮ್ ಅನ್ನು ಗೆದ್ದುಕೊಂಡರು. ಅಲ್ಲಿಯವರೆಗೆ ಕೊಠಾರಿ ಖಾತೆ ತೆರಯಲು ಅವಕಾಶವನ್ನೇ ನೀಡಲಿಲ್ಲ.
ಈ ಗೆಲುವಿನ ಮೂಲಕ ಅಡ್ವಾಣಿ ಕ್ಯಾಲೆಂಡರ್ ವರ್ಷದಲ್ಲಿ ಐದನೇ ಬಾರಿಗೆ ರಾಷ್ಟ್ರೀಯ, ಏಷ್ಯನ್ ಮತ್ತು ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿಯನ್ನು ಗೆದ್ದ ವಿಕ್ರಮ ನಿರ್ಮಿಸಿದರು. 2ನೇ ಪ್ರೇಮ್‌ ನಲ್ಲೂ ಕೊಠಾರಿ ತನಗೆ ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸದ ಕಾರಣ ಅಡ್ವಾಣಿ ಗೆಲುವಿನ ಹಾದಿ ಸುಗಮವಾಯಿತು.
ಪಂದ್ಯ ಗೆದ್ದ ಬಳಿಕ ಹರ್ಷ ವ್ಯಕ್ತಪಡಿಸಿದ ಅಡ್ವಾಣಿ, “ಸತತವಾಗಿ ಐದು ಬಾರಿ ವಿಶ್ವ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಕನಸು ನನಸಾಗಿದೆ. ಈ ವರ್ಷ ನಾನು ಭಾಗವಹಿಸಿದ ಪ್ರತಿ ಬಿಲಿಯರ್ಡ್ಸ್ ಈವೆಂಟ್‌ನಲ್ಲಿ ಗೆದ್ದಿದ್ದೇನೆ ಎಂಬುದರ ಬಗ್ಗೆ ನಿಜವಾಗಿಯೂ ಸಂತೋಷವಾಗಿದೆ. ನನ್ನ ದೇಶಕ್ಕೆ ಮತ್ತೊಂದು ಚಿನ್ನವನ್ನು ತಂದುಕೊಟ್ಟಿರುವ ಗೌರವವನ್ನು ಅನುಭವಿಸುತ್ತೇನೆ ಎಂದಿದ್ದಾರೆ. ಅಡ್ವಾಣಿ ಅವರು 12 ತಿಂಗಳ ಹಿಂದೆ ಕತಾರ್‌ನಲ್ಲಿ ಐಬಿಎಸ್‌ಎಫ್ 6-ರೆಡ್ ಸ್ನೂಕರ್ ವಿಶ್ವಕಪ್ ಗೆದ್ದ ಕೊನೆಯ ವಿಶ್ವ ಪ್ರಶಸ್ತಿಯನ್ನು ಗಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!