ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಬಲಿಷ್ಠ ತಂಡ ಪ್ರಕಟಿಸಿದ ಕರ್ನಾಟಕ: ತಂಡಕ್ಕೆ ಹೊಸ ನಾಯಕನ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022-2ಟಿ20 ಟೂರ್ನಿಗಾಗಿ ಬಲಿಷ್ಠ ಕರ್ನಾಟಕ ತಂಡವನ್ನು ಘೋಷಿಸಲಾಗಿದೆ. ಈ ಬಾರಿ ತಂಡದ ನಾಯಕನಾಗಿ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ತಂಡದಲ್ಲಿ ಮನಿಶ್‌ ಪಾಂಡೆ, ದೇವದತ್ ಪಡಿಕ್ಕಲ್, ಗೌತಮ್, ಅಭಿನವ್ ಮನೋಹರ್, ಶ್ರೇಯಸ್‌ ಸೇರಿದಂತೆ ಖ್ಯಾತನಾಮ ಆಟಗಾರರ ಬಳಗವಿದೆ. ಕರ್ನಾಟಕ ತಂಡವು ತನ್ನ ಮೊದಲ ಸುತ್ತಿನ ಪಂದ್ಯಗಳನ್ನು ಮೊಹಾಲಿಯಲ್ಲಿ ಆಡಲಿದೆ. ಅಕ್ಟೋಬರ್ 11 ರಂದು ಟೂರ್ನಿ ಆರಂಭವಾಗಲಿದೆ. ಎಲ್ಲಾ ನಾಕೌಟ್ ಪಂದ್ಯಗಳು ಹಾಗೂ ನವೆಂಬರ್ 5 ರಂದು ನಡೆಯಲಿರುವ ಫೈನಲ್ ಪಂದ್ಯವನ್ನು ಕೋಲ್ಕತ್ತಾದಲ್ಲಿ ಆಡಲಾಗುತ್ತಿದೆ. ಒಟ್ಟು 38 ತಂಡಗಳು ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿವೆ. ತಂಡಗಳನ್ನು ಐದು ಪ್ರತ್ಯೇಕ ಎಲೈಟ್ ಗುಂಪುಗಳಾಗಿ ವಿಂಗಡಿಸಲಾಗಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಎಲೈಟ್ ಗುಂಪುಗಳು:

ಎಲೈಟ್ ಎ (ಲಖನೌ): ಅಸ್ಸಾಂ, ಮಧ್ಯಪ್ರದೇಶ, ಮಿಜೋರಾಂ, ಮುಂಬೈ, ರೈಲ್ವೆ, ರಾಜಸ್ಥಾನ, ಉತ್ತರಾಖಂಡ, ವಿದರ್ಭ
ಎಲೈಟ್ ಬಿ (ಜೈಪುರ): ದೆಹಲಿ, ಗೋವಾ, ಹೈದರಾಬಾದ್, ಮಣಿಪುರ, ಪುದುಚೇರಿ, ಪಂಜಾಬ್, ತ್ರಿಪುರ, ಉತ್ತರ ಪ್ರದೇಶ
ಎಲೈಟ್ ಸಿ (ಮೊಹಾಲಿ): ಅರುಣಾಚಲ ಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮೇಘಾಲಯ, ಸರ್ವಿಸಸ್
ಎಲೈಟ್ ಡಿ (ಇಂದೋರ್): ಆಂಧ್ರ ಪ್ರದೇಶ, ಬರೋಡಾ, ಬಿಹಾರ, ಗುಜರಾತ್, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಸೌರಾಷ್ಟ್ರ
ಎಲೈಟ್ ಇ (ಲಕ್ನೋ): ಬಂಗಾಳ, ಚಂಡೀಗಢ, ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ, ಸಿಕ್ಕಿಂ, ತಮಿಳುನಾಡು
ಕರ್ನಾಟಕ ತಂಡ:
ಮಯಾಂಕ್ ಅಗರ್ವಾಲ್ (ಸಿ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಅಭಿನವ್ ಮನೋಹರ್, ಚೇತನ್ ಎಲ್ಆರ್, ಮನೋಜ್ ಭಾಂಡಗೆ, ಕೆ ಗೌತಮ್, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಲುವ್ನಿತ್ ಸಿಸೋಡಿಯಾ, ಶರತ್ ಬಿ.ಆರ್, ಕೌಶಿಕ್ ವಿ, ವೈಶಾಕ್ ವಿ, ಕಾವೇರಪ್ಪ, ವೆಂಕಟೇಶ್ ಎಂ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!