ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ಪ್ರತಿಭಟನಾಕಾರರು ಮಾಡಿದ್ದೇನು ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರ್ಥಿಕ ಬಿಕ್ಕಟ್ಟಿಗೆ ಬೇಸತ್ತ ಶ್ರೀಲಂಕಾ ಪ್ರಜೆಗಳ ಸಹನೆ ಕಟ್ಟೆಯೊಡೆದು, ಕೊಲಂಬೊದಲ್ಲಿರುವ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ನುಗ್ಗಿ, ರಂಪಾಟ ಮಾಡಿದ್ದಾರೆ. ಪ್ರತಿಭಟನಾಕಾರರು ಅಧ್ತಕ್ಷರ ಮನೆಗೆ ಮುತ್ತಿಗೆ ಹಾಕುವ ಮೊದಲೇ ಗೋಟಬಯ ರಾಜಪಕ್ಸೆ ಪರಾರಿಯಾಗಿದ್ದು, ಇದೀಗ ನಿವಾಸದ ತುಂಬ ಪ್ರತಿಭಟನಾಕಾರರದ್ದೇ ಕಾರುಬಾರಾಗಿದೆ.  ನಿವಾಸದ ಕೊಠಡಿಗಳಿಗೆ ನುಗ್ಗಿ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಎಂಜಾಯ್‌ ಮಾಡ್ತಿರುವ ವಿಡಿಯೋಗಳು ಇದೀಗ ವೈರಲ್‌ ಆಗಿವೆ.

ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಬಂಗಲೆಯಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಈಜಾಡಿ ಎಂಜಾಯ್‌ ಮಾಡಿದ್ದಾರೆ. ಶ್ರೀಲಂಕಾ ಧ್ವಜವನ್ನಿಡಿದು ಅಧ್ಯಕ್ಷರ ವಿರುದ್ಧ ಪ್ರತಿಭಟನೆ ಕೂಗುತ್ತಾ ನಿವಾಸದ ಕೊಠಡಿಗಳನ್ನೆಲ್ಲಾ ತಿರುಗಾಡುತ್ತಿರುವ ದೃಶ್ಯವಿದು.

ನಿವಾಸದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಛಿದ್ರ ಛಿದ್ರ ಮಾಡಿ, ತಿಂಡಿ-ತಿನಿಸುಗಳನ್ನು ಸ್ವಾಹ ಮಾಡಿದ್ದಾರೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಮದ್ಯ ಪತ್ತೆಯಾಗಿದ್ದು, ಪ್ರತಿಭಟನಾಕಾರರು ಕುಡಿದು ಸಿಕ್ಕಿದ್ದನ್ನೆಲ್ಲಾ ನಾಶ ಮಾಡಿದ್ದಾರೆ.

 

ಶ್ರೀಲಂಕಾದ ದಿನಪತ್ರಿಕೆ ಡೈಲಿ ಮಿರರ್ ವರದಿ ಪ್ರಕಾರ, ಪ್ರತಿಭಟನಾಕಾರರ ಕೈಗೆ ದೊರೆತ ಕೋಟ್ಯಾಂತರ ರೂಪಾಯಿ ಮೌಲ್ಯದ ಹಣವನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ. ಒಬ್ಬ ವ್ಯಕ್ತಿ ಹಣ ಎಣಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಧ್ಯಕ್ಷರ ನಿವಾಸ ಇದೀಗ ಪ್ರತಿಭಟನಾಕಾರರ ಸ್ಥಳವಾಗಿದೆ. ಬಂಗಲೆಯಲ್ಲಿ ದೊರೆತ ಎಲ್ಲವನ್ನು ತಿಂದು ತೇಗಿ, ಕುಡಿಸು, ಕುಣಿದು ಕುಪ್ಪಳಿಸುತ್ತಿದ್ದಾರೆ. ಗೋಡಬಯ ಬೆಡ್‌ರೂಂಗೆ ಲಗ್ಗೆಯಿಟ್ಟ ಯುವಕರ ಗುಂಪೊಂದು ಕುಸ್ತಿ ಆಟಕ್ಕಿಳಿದಿದ್ದಾರೆ. ಒಬ್ಬರು ಕಮೆಂಟ್‌ ಮಾಡುತ್ತಿದ್ದರೆ ಉಳಿದ ಯುವಕರು ಕುಸ್ತಿ ಆಟದಲ್ಲಿ ತುಡಗಿರುವ ವಿಡಿಯೋ ವೈರಲ್‌ ಆಗಿದೆ. ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ಯಾರಾಗಲಿದ್ದಾರೆ ಮುಂದಿನ ಅಧ್ಯಕ್ಷ ಎಂಬ ವಿಡಿಯೋಗಳು ಸಹ ಹರಿದಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!