ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಎರಡನೇ ಚಿನ್ನ ಗೆದ್ದ ಅವನಿ ಲೇಖರ!

ಹೊಸದಿಂತ ಡಿಜಿಟಲ್‌ ಡೆಸ್ಕ್‌
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಚಾಂಪಿಯನ್ ಪ್ಯಾರಾ ಅಥ್ಲೀಟ್ ಅವನಿ ಲೆಖರಾ ಚಿನ್ನದ ಪದದಕ ಗೆದ್ದಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್ 1 ಈವೆಂಟ್‌ನಲ್ಲಿ ವಿಶ್ವದಾಖಲೆಯ ಚಿನ್ನದ ಪದಕ ಗೆದ್ದ ಕೆಲವೇ ದಿನಗಳ ಅಂತರದಲ್ಲಿ ಎರಡನೇ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. 20 ವರ್ಷದ ಪ್ಯಾರಾ ಶೂಟರ್ ಅವನಿ ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಗೇಮ್ಸ್‌ನಲ್ಲಿಯೂ ಚಿನ್ನದ ಪದಕ ಗೆದ್ದಿದ್ದರು. ಅವರು ಕಳೆದೊಂದು ವರ್ಷದಿಂದ ಅತ್ಯತ್ತಮ ಫಾರ್ಮ್‌ ನಲ್ಲಿ ಸಾಗುತ್ತಿದ್ದಾರೆ.

ಮಹಿಳೆಯರ ವಿಭಾಗದ 50 ಮೀ. ಎಸ್.ಹೆಚ್‌1 ಸ್ಪರ್ಧೆಯಲ್ಲಿ ಅವನಿ ಲೆಖರಾ 458.3 ಪಾಯಿಂಟ್‌ಗಳನ್ನು ಕಲೆಹಾಕಿ ಸ್ಲೋವಾಕಿಯಾದ ಅನುಭವಿ ಶೂಟರ್ ವೆರೋನಿಕಾ ವಡೋವಿಕೋವಾ ವಿರುದ್ಧ ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಸ್ವೀಡನ್‌ನ ಅನ್ನಾ ನಾರ್ಮನ್ 441.9 ಅಂಕಗಳೊಂದಿಗೆ ಕಂಚಿನ ಪದಕ ಪಡೆದರು.
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಅವನಿ ಅವರ ಅದ್ಭುತ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ, ಅವರು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಯುವ ಶೂಟರ್ ಗೆ ಟ್ವಿಟರ್‌ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಯುವ ವಿಶ್ವ ಚಾಂಪಿಯನ್‌ ಅವನಿಗೆ ರಾಷ್ಟ್ರದ ಮೂಲೆ ಮೂಲೆಗಳಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ, ಅವನಿ ಮೇಲೆ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಹೆಚ್ಚಿದ್ದವು. ಅವನಿ ಕಳೆದ ವರ್ಷದ ಪ್ಯಾರಾ ಗೇಮ್ಸ್‌ ಬಳಿಕ ಕಣಕ್ಕಿಳಿದ ತನ್ನ ಮೊದಲ ಪ್ರಮುಖ ಸ್ಪರ್ಧೆಯಲ್ಲಿ ಒಂದು ವಾರದೊಳಗೆ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಆ ನಿರೀಕ್ಷೆಗಳನ್ನು ತಲುಪಿಸಿದರು.
ಅವನಿ ಪ್ಯಾರಾಲಿಂಪಿಕ್ ಪ್ಯಾರಾಲಿಂಪಿಕ್ ವಿಶ್ವಕಕಪ್ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!