ಭಾರತದಲ್ಲೇ ಮೊದಲಬಾರಿಗೆ ಸಂಪೂರ್ಣವಾಗಿ ಸೌರವಿದ್ಯುತ್‌ ಬಳಸಿ ವಿದ್ಯುತ್ ಸಮಸ್ಯೆ ದೂರಗೊಳಿಸಿದೆ ಈ ಗ್ರಾಮ

ಹೊಸದಿಗಂತ ಡಿಜಟಿಲ್‌ ಡೆಸ್ಕ್:‌
ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳಿಗೆ ಹೆಚ್ಚಿನ ಒತ್ತು ನೀಡುತ್ತ ಸೌರ ಶಕ್ತಿಯ ಬಳಸಿ ಮಾನವನ ಇಂಧನ ಕೊರತೆಯನ್ನು ನೀಗಿಸಲು ಜಾಗತಿಕವಾಗಿ ವ್ಯಾಪಕ ಪ್ರಯತ್ನಗಳಾಗುತ್ತಿವೆ. ಭಾರತವೂ ಕೂಡ ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿದೆ. ಇದಕ್ಕೆ ಪೂರಕವೆಂಬಂತೆ ಗುಜರಾತ್‌ ನ ಹಳ್ಳಿಯೊಂದು ಸಂಪೂರ್ಣವಾಗಿ ಸೌರ ಶಕ್ತಿ ಚಾಲಿತವಾಗಿ ಮಾರ್ಪಾಡಾಗಿದೆ.

ಗುಜರಾತ್‌ ರಾಜ್ಯದಲ್ಲಿರುವ ಮೊಧೇರಾ ಎಂಬ ಹಳ್ಳಿಯಲ್ಲಿ ಸೌರಶಕ್ತಿಯನ್ನು ಬಳಸಿ 24/7 ಗ್ರಾಮೀಣ ವಿದ್ಯುತ್‌ ಅವಶ್ಯಕತೆಯನ್ನು ಪೂರೈಸಬಹುದು ಎಂಬುದು ಸಾಬೀತಾಗಿದೆ. 1,400 ಜನರು ವಾಸಿಸುವ ಈ ಪ್ರದೇಶದಲ್ಲಿ ಬೇರೆ ಯಾವುದೇ ವಿದ್ಯುತ್‌ ಸಂಪರ್ಕವಿಲ್ಲ. ಸೌರ ಶಕ್ತಿಯನ್ನು ಬಳಸಿ ಊರಿಗೆ ಅಗತ್ಯವಿರುವಷ್ಟು ವಿದ್ಯುತ್‌ ಅನ್ನು ಅಲ್ಲಿಯೇ ಉತ್ಪಾದಿಸಲಾಗುತ್ತದೆ.

ಇಲ್ಲಿ ಬಳಸಲಾಗಿರುವ ಗ್ರೀನ್‌ಪವರ್‌ ಮಾನಿಟರ್‌ ವ್ಯವಸ್ಥೆಯು ಪವರ್ ಪ್ಲಾಂಟ್ ಕಂಟ್ರೋಲರ್ ಮತ್ತು ಎನರ್ಜಿ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಇಎಂಎಸ್)‌ ಗಳನ್ನು ಒಳಗೊಂಡಿದ್ದು ಇಂಧನ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯಕವಾಗಿದೆ.

ಭಾರತದಲ್ಲಿ ತಲೆದೂರಿರುವ ಗ್ರಾಮೀಣ ವಿದ್ಯುತ್‌ ಸಮಸ್ಯೆಯನ್ನು ಹೋಗಲಾಡಿಸುವ ದೃಷ್ಟಿಯಲ್ಲಿ ನವೀಕರಿಸಬಹುದಾದ ಇಂಧನ ಸಚಿವಾಲಯವು 2020ರಲ್ಲಿ ಮೊದೇರಾ ಹಳ್ಳಿಯನ್ನು ಆಯ್ದುಕೊಂಡಿತು. ಗುಜರಾತ್‌ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಸುಮಾರು 8.37 ಮಿಲಿಯನ್‌ ಡಾಲರ್‌ ವೆಚ್ಚದಲ್ಲಿ ಈ ಯೋಜನೆ ಕಾರ್ಯಗತವಾಯಿತು. ಆ ಮೂಲಕ ಕೃಷಿ ಮತ್ತು ಇತರ ಬಳಕೆಗೆ ಅಗತ್ಯವಿರುವ ವಿದ್ಯುತ್ತನ್ನು ಸೌರಶಕ್ತಿಯನ್ನು ಬಳಸಿ ಉತ್ಪಾದಿಸುವ ಕೆಲಸ ಪ್ರಾರಂಭವಾಯಿತು. ಪ್ರಸ್ತುತ ಮೊಧೇರಾ ಹಳ್ಳಿಯು ದೇಶದ ಮೊದಲ ಸಂಪೂರ್ಣ ಸೌರಶಕ್ತಿಚಾಲಿತ ಹಳ್ಳಿಯಾಗಿ ದೇಶದ ಇತರ ಹಳ್ಳಿಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ.

ವಿಶೇಷವೇನೆಂದರೆ ಇಲ್ಲಿ ಉತ್ಪಾದನೆಯಾದ ಸೌರವಿದ್ಯುತ್ತನ್ನು ಹೈಬ್ರೀಡ್‌ ಬ್ಯಾಟರಿಗಳನ್ನು ಬಳಸಿ ಸಂಗ್ರಹಿಸಬಹುದಾಗಿದೆ. ಆಮೂಲಕ ಇಡೀ ಊರಿಗೆ ಅಗತ್ಯವಿರುವ ವಿದ್ಯುತ್‌ ಶೇಖರಿಸಬಹುದಾಗಿದೆ. ಇದು ಸೂರ್ಯಕಿರಣಗಳಿಲ್ಲದ ಸಮಯದಲ್ಲೂ ಕೂಡ ವಿದ್ಯುತ್‌ ಪೂರೈಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ.

ಇಲ್ಲಿ ವಿದ್ಯುತ್ ಸ್ಥಾವರ ನಿಯಂತ್ರಕ (PPC) ಮತ್ತು ಶಕ್ತಿ ನಿರ್ವಹಣಾ ವ್ಯವಸ್ಥೆ (EMS), ಎನರ್ಜಿ ಶಿಫ್ಟಿಂಗ್, ಸ್ಟೇಟ್-ಆಫ್-ಚಾರ್ಜ್ (SoC) ಬ್ಯಾಟರಿಗಳ ನಿರ್ವಹಣೆ ಮತ್ತು ಸಮತೋಲನ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಅಲ್ಲದೇ ಶಕ್ತಿ ಉತ್ಪಾದನರಯನ್ನು ಗರಿಷ್ಟವಾಗಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲಾಗಿದೆ. ಹಾಗೂ 6MW ಸೋಲಾರ್ PV ಪವರ್ ಪ್ಲಾಂಟ್, 6MW/15MWh ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆ (BESS), ತಲಾ 1kW ನ 271 ಮೇಲ್ಛಾವಣಿ ಸೌರ ಅರೇಗಳು, ಸ್ಮಾರ್ಟ್ ಮೀಟರ್‌ಗಳು ಮತ್ತು ಎಲೆಕ್ಟ್ರಿಕ್ ವೆಹಿಕಲ್ (EV) ಚಾರ್ಜಿಂಗ್ ಉಪಕರಣಗಳನ್ನುಅಳವಡಿಸಲಾಗಿದೆ. ಆ ಮೂಲಕ ಪ್ರತಿ ಮನೆಗಳಿಗೂ ಸೌರ ವಿದ್ಯುತ್‌ ಸಂಪರ್ಕಕೊಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!