September 29, 2026
Tuesday, September 29, 2026
spot_img

ಪೋಷಕರ ಯಡವಟ್ಟು: ಮನೆಯಲ್ಲೇ ಮಗು ಇದ್ರೂ ಕಿಡ್ನಾಪ್ ಕಂಪ್ಲೇಂಟ್; ಆಮೇಲೇನಾಯ್ತು?

ಹೊಸದಿಗಂತ ವರದಿ ಶ್ರೀರಂಗಪಟ್ಟಣ:

ಮೂರು ವರ್ಷದ ಮಗುವೊಂದು ಮನೆಯ ಸೋಫಾದಡಿ ಮಲಗಿ ದೀರ್ಘ ನಿದ್ದೆಗೆ ಜಾರಿದ್ದು, ಅದನ್ನ ಗಮನಿಸದ ಪೋಷಕರು ಮನೆಯಲ್ಲಿ ಮಗು ಕಾಣುತ್ತಿಲ್ಲ ಅಪಹರಣವಾಗಿದೆ ಎಂದು ಪೊಲೀಸರಿಗೆ ದೂರು ನೀಡಿ ಎಡವಟ್ಟಾಗಿರುವ ಘಟನೆ ಶ್ರೀರಂಗಪಟ್ಟಣ ಟೌನ್ ಗಂಜಾಂನಲ್ಲಿ ನಡೆದಿದೆ.

ಮನೆಯಲ್ಲಿ ಮಗುವನ್ನು ಹುಡುಕಿದರೂ ಕಾಣಲಿಲ್ಲ ಎಂದು ಗಾಬರಿಗೊಂಡ ಪೋಷಕರು ಆತಂಕಗೊಂಡು 112 ಕ್ಕೆ ಕರೆ ಮಾಡಿ ಕಿಡ್ನಾಪ್ ಎಂದು ದೂರು ನೀಡಿದ್ದಾರೆ. ಪೋಷಕರ ಎಡವಟ್ಟಿನ ದೂರಿಗೆ ಮಗುವಿಗಾಗಿ ಪೊಲೀಸರು ಅಲೆದಾಡಿ ಮತ್ತೆ ಮನೆಯಲ್ಲೇ ಶೋಧನಾ ಕಾರ್ಯ ನಡೆಸಿ, ಕಡೆಗೆ ಮನೆಯ ಸೋಫಾದಡಿ ಮಗು ನಿದ್ರೆಯಲ್ಲಿರುವುದನ್ನು 112ರ ಪೊಲೀಸರು ಪತ್ತೆ ಹಚ್ಚಿದಾರೆ.

ಇದನ್ನೂ ಓದಿ:

ಪೋಷಕರ ಎಡವಟ್ಟಿ ದೂರಿಗೆ ಹುಡುಕಾಡಿ ಹೈರಾಣಾದ ಪೊಲೀಸ್ ಸಿಬ್ಬಂದಿಗಳು ಮಗು ಪತ್ತೆಯಾದ ಬಳಿಕ ಪೋಷಕರಿಗೆ ತಿಳಿ ಹೇಳಿ ಮಗು ಬಗ್ಗೆ ಎಚ್ಚರದಿಂದ ಇರುವಂತೆ ತಿಳಿಹೇಳಿದ್ದಾರೆ.

Must Read