ಚೀನಾದ ಡ್ರ್ಯಾಗನ್ ಸೇನೆಯಿಂದ ಅರುಣಾಚಲ ಪ್ರದೇಶದ ಯುವಕನ ಅಪಹರಣ: ಸಂಸದ ತಪಿರ್ ಗಾವೋ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಡ್ರಾಗನ್ ಸೇನೆ ಅರುಣಾಚಲ ಪ್ರದೇಶದ ಯುವಕನೊಬ್ಬನನ್ನು ಅಪರಹಣ ಮಾಡಿದೆ ಎಂದು ಅರುಣಾಚಲ ಸಂಸದ ತಪಿರ್ ಗಾವೋ ಆರೋಪ ಮಾಡಿದ್ದಾರೆ.

ಸಿಯಾಂಗ್ ಜಿಲ್ಲೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ 17 ವರ್ಷದ ಮಿರಾಟ್ ಟ್ಯಾರೋನ್ ಎಂಬ ಯುವಕನನ್ನು ಅಪರಹರಿಸಿದೆ ಎಂದು ಗಾವೋ ಆರೋಪಿಸಿದ್ದಾರೆ. ಟ್ಯಾರೋನ್ ಅಪಹರಣ ಸಂದರ್ಭ ಈತನ ಜೊತೆ ಸ್ನೇಹಿತ ಜಾನಿ ಯಾಯಿಂಗ್ ಇದ್ದ. ಈತ ತಪ್ಪಿಸಿಕೊಂಡು ಬಂದಿದ್ದು, ಅಪಹರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಎಂದು ಹೇಳಿದ್ದಾರೆ.

ಇವರಿಬ್ಬರು ಜಿಡೋ ಗ್ರಾಮದ ಸ್ಥಳೀಯ ಬೇಟೆಗಾರರಾಗಿದ್ದಾರೆ. ತ್ಸಾಂಗ್ಪೋ ನದಿ ಬಳಿ ಭಾರತ ಪ್ರವೇಶಿಸುವ ಸಮೀಪ ಈ ಘಟನೆ ನಡೆದಿದೆ. ಈ ಬಗ್ಗೆ ಗಾವೋ ಟ್ವೀಟ್ ಮಾಡಿದ್ದು, ಚೀನಿ ಪಿಎಲ್‌ಎ ಅವರು 17 ವರ್ಷಗಳ ಜಿಡೋ ವಿಲ್‌ನ ಶ್ ಮಿರಾಮ್ ಟ್ಯಾರೋನ್ ಅವರನ್ನು ಅಪಹರಿಸಿದ್ದಾರೆ. ಭಾರತ ಸರ್ಕಾರದ ಎಲ್ಲಾ ಏಜೆನ್ಸಿಗಳು ಆತನನ್ನು ಶೀಘ್ರ ಬಿಡುಗಡೆ ಮಾಡಲು ಮುಂದಾಗುವಂತೆ ವಿನಂತಿಸಲಾಗಿದೆ ಎಂದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!