ದಿವಾಳಿಯತ್ತ ಸಾಗುತ್ತಿರುವ ಶ್ರೀಲಂಕಾ: ಸಾಲದ ಸುಳಿವಿನಲ್ಲಿ ರಾಷ್ಟ್ರ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದ ಆರ್ಥಿಕತೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಭಾರತದ ನೆರೆರಾಷ್ಟ್ರ ಶ್ರೀಲಂಕಾ ಈಗ ಸಾಲದ ಸುಳಿವಲ್ಲಿ ಸಿಲುಕಿಕೊಂಡಿದೆ ಎಂದು ವರದಿ ತಿಳಿಸಿದೆ.
ಇಂತಹ ಪರಿಸ್ಥಿಯಲ್ಲಿರುವ ಶ್ರೀಲಂಕಾಕ್ಕೆ ಭಾರತ ನೆರವಿನ ಹಸ್ತ ಚಾಚಿದ್ದು, ತುರ್ತು ಇಂಧನ ಖರೀದಿಸಲು 500 ಮಿಲಿಯನ್‌ ಡಾಲರ್‌ ಮೊತ್ತವನ್ನು ಸಾಲದ ರೂಪದಲ್ಲಿ ನೀಡಲಿದೆ. ಸಾಲ ಮರುಪಾವತಿಗೆ ಸಹಾಯವಾಗಲೆಂದು ಕಳೆದ ವಾರ ಭಾರತ 400 ಮಿಲಿಯನ್‌ ಡಾಲರ್‌ ನೆರವು ನೀಡಿತ್ತು.
ಶ್ರೀಲಂಕಾದಲ್ಲಿನ ಹಣದುಬ್ಬರ ಹೆಚ್ಚಾಗಿದ್ದು, ಆಹಾರ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ. ಶ್ರೀಲಂಕಾದ ಬಿಕ್ಕಟ್ಟಿಗೆ ಹಲವಾರು ಕಾರಣಗಳಿದ್ದು, ದೇಶದಲ್ಲಿ ಪ್ರವಾಸೋದ್ಯಮವೇ ಆರ್ಥಿಕತೆಯ ಜೀವನಾಡಿಯಾಗಿತ್ತು. ಕೋವಿಡ್‌ ಕಾರಣದಿಂದ ಪ್ರವಾಸೋದ್ಯಮ ಕುಸಿದಿದ್ದು, ಇಡೀ ದೇಶದ ಅರ್ಥ ವ್ಯವಸ್ಥೆ ದಿವಾಳಿಯಾಗುವ ಅಂಚಿನಲ್ಲಿದೆ.
ಇನ್ನುಳಿದಂತೆ ಶ್ರೀಲಂಕಾ ಚೀನಾದಿಂದ ಪಡೆದ ಸಾಲ ಮರುಪಾವತಿ ಮಾಡಬೇಕಿದೆ. ಕನಿಷ್ಠ ಮಟ್ಟಕ್ಕಿಳಿದ ವಿದೇಶಿ ವಿನಿಮಯ ಸಂಗ್ರಹದಿಂದ ಶ್ರೀಲಾಂಕಾ ಆರ್ಥಿಕವಾಗಿ ಕುಸಿದಿದೆ. ಶ್ರೀಲಂಕಾದಲ್ಲಿ ಹಾಲು, ಆಹಾರ ವಸ್ತು, ಗ್ಯಾಸ್‌ ಸಿಲಿಂಡರ್‌, ವೈದ್ಯಕೀಯ ಉತ್ಪನ್ನಗಳ ಬೆಲೆ ಹೆಚ್ಚಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!