Saturday, July 2, 2022

Latest Posts

ಪಕ್ಷ ಬಲವರ್ಧನೆಗೆ ಚಿಂತನೆ: ಶರದರಾವಜಿ ಪವಾರ್

ಹೊಸದಿಗಂತ ವರದಿ, ಚಿಕ್ಕೋಡಿ:

ಕರ್ನಾಟಕ ರಾಜ್ಯದಲ್ಲಿ ಎನ್.ಸಿ.ಪಿ ಪಕ್ಷದ ಬಗ್ಗೆ ಜನರಿಗಿರುವ ಉಸ್ತುಕತೆ ಕಂಡು ಖುಷಿ ಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕರ್ನಾಟಕ ಪಕ್ಷ ಬಲವರ್ಧನೆ ಚಿಂತಿಸುವದಾಗಿ ತಿಳಿಸಿದ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಮುಖಂಡ ಹಾಗು ರಾಜ್ಯಸಭಾ ಸದಸ್ಯರಾದ ಶರದ ಪವಾರ ಹೆಚ್ಚಿನ ಗುಟ್ಟು ಬಿಟ್ಟುಕೊಡದೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಿಕ್ಕೋಡಿ ಆಗಮಿಸಿರುವದಾಗಿ ಹೇಳಿದರು.

ಎನ್.ಸಿ.ಪಿ ಚಿಕ್ಕೋಡಿ ಕಾರ್ಯಕರ್ತರ ಕುಶಲೋಪರಿ ವಿಚಾರಿಸಿ, ಉದ್ದೇಶಿಸಿ ಮಾತನಾಡಿದ ಅವರು ಯಾವದೇ ಸಾಮಾನ್ಯ ಜನರ ಸಮಸ್ಯೆ ಇದ್ದರು ಬಗೆಹರಿಸುತ್ತೆನೆ. ರಾಜಕಿಯ ವಿಷಯದ ಬಗ್ಗೆ ಮತ್ತೋಮ್ಮೆ ಚರ್ಚಿಸುವದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಎನ್.ಸಿ.ಪಿ ರಾಜ್ಯ ಅದ್ಯಕ್ಷ ಅರ್.‌ಹರಿ, ಎನ್.ಸಿ.ಪಿ ಚಿಕ್ಕೋಡಿ ಮುಖಂಡ ಮಹಮ್ಮದರಜಾಕ್ ಪಠಾನ್, ಜಿಲ್ಲಾ ಅಧ್ಯಕ್ಷ ಅಮೋಲ ದೇಸಾಯಿ, ಜಿಲ್ಲಾ ಉಪಾಧ್ಯಕ್ಷ ಸಂತೋಷ ರಾಯಜಾಧವ,ಸಲ್ಮಾನ ಪಠಾಣ,ನಯಿಮ್ ಮುಲ್ಲಾ, ಅಪ್ಪಾಸಾಹೇಬ ನಾಯಕ, ನಯೀಮ ಅಸುದೆ, ಬಿ.ಎಸ್ ಪಾಟೀಲ, ಜಮಾದಾರ ಎನ್.ಸಿ.ಪಿ‌ ಮುಖಂಡರು , ಕಾರ್ಯಕರ್ತರು ಇದ್ದರು.

ರಾಜ್ಯದ ಮರಾಠಾ ಸಮುದಾಯಕ್ಕೆ 2 ಎ ಮೀಸಲಾತಿ ಕೋರಿ ಮರಾಠಾ ಸಮುದಾಯದ ಯುವರಾಯ ಶೆಂಡೂರೆ, ಬಾಳಾಸಾಹೇಬ ಪಾಟಿಲ, ಅರುಣ ಬಿದರೆ, ನ್ಯಾ ವಿನೋದ ಗೊರೆ, ನ್ಯಾ. ಬಾಳಾಸಾಹೇಬ ಬೆಲೆಕರ್, ಸುಮಿತ್ರಾ ಉಗಳೆ, ರಮೇಶ ರಾಯಜಾಧವ, ಎಕನಾಥ ಬಿದರೆ, ಬಾಳು ಜೆದೆ, ಧನರಾಜ ಶೆಂಡುರೆ, ಓಂಕಾರ ಶೇಂಡುರೆ, ಸುಧಾಕರ ಜೆಧೆ, ರಾಹು ಶಿಂಧೆ ಸೇರಿ ಸುಮುದಾಯದ ಮುಖಂಡರಿಂದ ಮನವಿ ಸಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss