ರೇಡಿಯೋ ಆಕ್ಟೀವ್ ವಸ್ತು ಜತೆ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಡಿಯೋ ಆಕ್ಟೀವ್ ವಸ್ತು ಜತೆ ವಿಮಾನ ಪ್ರಯಾಣ ಮಾಡಿ ನಂತರ ಸಿಕ್ಕಿಬಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ. ಪ್ರಯಾಣಿಸುವಾಗ ತನ್ನ ಬ್ಯಾಗ್‌ನಲ್ಲಿ ಕೋಬಾಲ್ಟ್‌ನ್ನು ಮರೆಮಾಚಿ ಇಟ್ಟುಕೊಂಡಿದ್ದ, ಮನುಷ್ಯರಿಗೆ ಹಾನಿಯಾಗುವ ಕಿರಣಗಳನ್ನು ಇದು ಹೊಂದಿದೆ ಎಂದು ಎಫ್‌ಐಆರ್ ದಾಖಲಿಸಿ ಆತನನ್ನು ಬಂಧಿಸಲಾಗಿದೆ.

ಭೂವನೇಶ್ವರದಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕ ಚೆಕ್‌ಔಟ್ ವೇಳೆ ಮಶೀನ್‌ನಿಂದ ಬೀಪ್ ಶಬ್ದ ಬಂದಿದ್ದು, ಚೆಕಿಂಗ್ ಮಾಡಲಾಗಿದೆ. ನಂತರ ಕೋಬಾಲ್ಟ್ ಎರಡು ರಾಡ್‌ಗಳ ಮಧ್ಯೆ ಬಚ್ಚಿಟ್ಟಿದ್ದ ರೀತಿಯಲ್ಲಿ ಸಿಕ್ಕಿದೆ. ನನಗೆ ಗೊತ್ತಿಲ್ಲ, ಇದು ಹೇಗೆ ಇಲ್ಲಿದೆ ಎನ್ನುವಂತೆ ಪ್ರಯಾಣಿಕ ಪ್ರತಿಕ್ರಿಯೆ ನೀಡಿದ್ದಾನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಇಂಡಿಗೋ ವಿಮಾನ ಸಂಸ್ಥೆ ಪ್ರತಿಕ್ರಿಯೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!