ಇನ್ನೂ ಮುಗಿದಿಲ್ಲ ರಾಖಿ ಮದುವೆ ರಂಪಾಟ, ಗಂಡನಿಗೆ ಮತ್ತೊಬ್ಬಳು ಇಷ್ಟ ಎಂದ ನಟಿ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ರಾಖಿ ಸಾವಂತ್ ಮದುವೆ ರಂಪಾಟದ ಕಥೆ ಇನ್ನೂ ಮುಗಿದಿಲ್ಲ.
ಆದಿಲ್ ನನ್ನ ಗಂಡ, ನಾವಿಬ್ಬರೂ ಸುಖವಾಗಿದ್ದೇವೆ ಎಂದು ಹೇಳಿದ ಕೆಲವೇ ದಿನದಲ್ಲಿ ರಾಖಿ ಮತ್ತೊಂದು ಸಮಸ್ಯೆ ಹೊತ್ತು ಮಾಧ್ಯಮದ ಮುಂದೆ ಬಂದಿದ್ದಾರೆ.

ನನ್ನ ಪತಿ ಆದಿಲ್‌ಗೆ ಬೇರೊಂದು ಹುಡುಗಿ ಜತೆ ಸಂಬಂಧ ಇದೆ ಎಂದು ರಾಖಿ ದೂರಿದ್ದಾರೆ. ರಾಖಿ ಮದುವೆಯಾದ ಆದಿಲ್ ಕೆಲದಿನಗಳ ವರೆಗೆ ರಾಖಿ ನನ್ನ ಹೆಂಡತಿಯೇ ಅಲ್ಲ ಎಂದು ಹೇಳಿಕೊಂಡಿದ್ದರು. ಅದಾದ ನಂತರ ಎಲ್ಲವೂ ಸುಖಾಂತ್ಯ ಕಂಡಿದ್ದು, ಆದಿಲ್‌ಗಾಗಿ ನಾನು ಫಾತಿಮಾ ಆಗಿ ಬದಲಾಗಿದ್ದೇನೆ ಆದರೆ ಆದಿಲ್ ನನಗೆ ಮೋಸ ಮಾಡಿದ್ದಾನೆ. ಇನ್ನೊಬ್ಬ ಮಹಿಳೆ ಜೊತೆ ಎಕ್ಸ್ಟಾ ಮೆರೈಟಲ್ ಅಫೇರ್ ಹೊಂದಿದ್ದಾನೆ ಎಂದು ರಾಖಿ ಕ್ಯಾಮೆರಾ ಮುಂದೆ ಕಣ್ಣೀರಿಟ್ಟಿದ್ದಾರೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!