Friday, February 3, 2023

Latest Posts

ಏರ್‌ಲೈನ್ಸ್‌ ವಿಮಾನದಲ್ಲಿ ಬಲವಾದ ಗಾಳಿ: 36 ಮಂದಿಗೆ ಗಂಭೀರ ಗಾಯ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇನ್ನು ಸ್ವಲ್ಪ ಹೊತ್ತು ಕಳೆದಿದದ್ದರೆ ವಿಮಾನ ಲ್ಯಾಂಡ್ ಆಗಿ, ಪ್ರಯಾಣಿಕರೆಲ್ಲರೂ ತಮ್ಮ ತಮ್ಮ ಕೆಲಸಗಳತ್ತ ತೆರಳುತ್ತಿದ್ದರು. ಆದರೆ, ವಿಧಿಯ ಆಟವೇ ಬೇರೆ ಇತ್ತು ಅನಿಸುತ್ತೆ. ಪ್ರಯಾಣಿಕರು ಸೀಟ್ ಬೆಲ್ಟ್ ತೆಗೆದು ವಿಮಾನದಿಂದ ಇಳಿಯಲು ವ್ಯವಸ್ಥೆ ಮಾಡುತ್ತಿದ್ದಾಗಲೇ ಯಾರೂ ನಿರೀಕ್ಷಿಸದ ರೀತಿಯಲ್ಲಿ ಜೋರಾಗಿ ಗಾಳಿ ಬೀಸಿದ ಪರಿಣಾಮ ವಿಮಾನ ಒಮ್ಮೆಲೇ ನಡುಗಿದೆ. ಸೀಟ್ ಬೆಲ್ಟ್ ತೆಗೆದ ಪ್ರಯಾಣಿಕರೆಲ್ಲಾ ವಿಮಾನದಲ್ಲಿ ಗಾಳಿಯಲ್ಲಿ ತೇಲಾಡಿ ಕುಸಿದು ಬಿದ್ದರು. ಈ ಅಪಘಾತದಲ್ಲಿ 36 ಮಂದಿ ಗಂಭೀರ ಗಾಯಗೊಂಡಿದ್ದು, ಅವರಲ್ಲಿ 11 ಮಂದಿ ಪರಿಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಓರ್ವ ಪ್ರಯಾಣಿಕ ಪ್ರಜ್ಞಾಹೀನನಾಗಿದ್ದಾನೆ. ವಿಮಾನದ ಮೇಲ್ಛಾವಣಿಯಲ್ಲಿ ಬಿರುಕು ಬೀಳುವಷ್ಟು ಪ್ರಬಲವಾಗಿ ಗಾಳಿ ಬೀಸಿದೆ.

ಹವಾಯಿಯನ್ ಏರ್ಲೈನ್ಸ್ ವಿಮಾನವು ಫೀನಿಕ್ಸ್ನಿಂದ ಹೊನೊಲುಲುವಿಗೆ ಹೊರಟಿತು. 10 ಸಿಬ್ಬಂದಿ ಮತ್ತು 278 ಪ್ರಯಾಣಿಕರು ಇದರಲ್ಲಿ ಪ್ರಯಾಣಿಸುತ್ತಿದ್ದರು. ಬಲವಾದ ಗಾಳಿ ಬೀಸಿದ ಪರಿಣಾಮ ಸೀಟಿನ ಮೇಲೆ ಕುಳಿತ ಪ್ರಯಾಣಿಕರೆಲ್ಲ ಒಮ್ಮೆಲೆ ಗಾಳಿಯಲ್ಲಿ ಹಾರಿ ವಿಮಾನದ ಮೇಲ್ಭಾ, ಸೀಟುಗಳಿಗೆ ಹೊಡೆದ ಕಾರಣ ಗಾಯಗಳಾಗಿವೆ. ವಿಮಾನದಿಂದ ಇಳಿದ ತಕ್ಷಣ, ಹೊನೊಲುಲು ತುರ್ತು ವೈದ್ಯಕೀಯ ಸೇವೆಗಳು ಘಟನಾ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದರು.

ಈ ಘಟನೆಯನ್ನು ವಿಮಾನದಲ್ಲಿದ್ದ ಪ್ರಯಾಣಿಕರು ವಿಡಿಯೋ ಮಾಡಿ ತಮ್ಮ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!