Friday, June 9, 2023

Latest Posts

ಪಠಾಣ್ ವಿಡಿಯೋ ಗೇಮ್, ಮತ್ತೇನು ಇಲ್ಲ: ಶಾರುಖ್ ಸಿನಿಮಾ ಟೀಕಿಸಿದ ಪಾಕ್ ಜನರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಭಾರತದಲ್ಲಿ ಸಕ್ಸಸ್‌ ಕಂಡಿತ್ತು. ಪಠಾಣ್ ಗೆಲುವು ಶಾರುಖ್ ಮಾತ್ರವಲ್ಲದೇ ಇಡೀ ಬಾಲಿವುಡ್‌ಗೂ ಮುಖ್ಯವಾಗಿತ್ತು. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಪಠಾಣ್ ದೊಡ್ಡ ಬ್ರೇಕ್ ನೀಡಿತ್ತು.

ಆದ್ರೆ ಪಾಕ್ ಮಂದಿ ಶಾರುಖ್ ಪಠಾಣ್ ಸಿನಿಮಾವನ್ನು ಟೀಕಿಸುತ್ತಿದ್ದಾರೆ. ಹೌದು, ಭಾರತದ ಸಿನಿಮಾಗಳು ಪಾಕಿಸ್ತಾನದಲ್ಲಿ ರಿಲೀಸ್​ ಆಗುತ್ತಿಲ್ಲ. ಆದರೆ ಒಟಿಟಿ ಮೂಲಕ ಅಲ್ಲಿನ ಪ್ರೇಕ್ಷಕರು ಭಾರತದ ಚಿತ್ರಗಳನ್ನು ನೋಡುತ್ತಾರೆ.

ಹೀಗೆ ಶಾರುಖ್​ ಖಾನ್​ (Shah Rukh Khan) ನಟನೆಯ ‘ಪಠಾಣ್​’ ಸಿನಿಮಾ ಒಟಿಟಿಗೆ ಕಾಲಿಟ್ಟಿತು. ಈ ಚಿತ್ರವನ್ನು ಪಾಕಿಸ್ತಾನಿ ಪ್ರೇಕ್ಷಕರು ನೋಡಿ, ವಿಮರ್ಶೆ ತಿಳಿಸುತ್ತಿದ್ದಾರೆ.
ಪಾಕಿಸ್ತಾನಿ ನಟ-ಚಿತ್ರಕಥೆಗಾರ ಯಾಸಿರ್ ಹುಸೇನ್ ಪಠಾಣ್ ಸಿನಿಮಾದ ವಿಮರ್ಶೆ ಮಾಡಿದ್ದು ಇದೊಂದು ಕಥೆ ಇಲ್ಲದ ವಿಡಿಯೋ ಗೇಮ್ ಎಂದು ಜರಿದಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾ ವೀಕ್ಷಿಸಿದ ಯಾಸಿರ್, ಶಾರುಖ್ ಸಿನಿಮಾವನ್ನು ಟೀಕಿಸಿದ್ದಾರೆ. ಯಾಸಿರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, ನೀವು ಫಸ್ಟ್ ಮಿಷನ್ ಇಂಪಾಸಿಬಲ್ ಅನ್ನು ನೋಡಿದ್ರೆ ಶಾರುಖ್ ಖಾನ್ ಅವರ ಪಠಾಣ್ ಕಥೆ ಹೆಚ್ಚು ಕಡಿಮೆ ವಿಡಿಯೋ ಗೇಮ್‌ನಂತ ಇದೆ. ಹೆಚ್ಚೇನು ಇಲ್ಲ’ ಎಂದು ಹೇಳಿದ್ದಾರೆ.

ಯಾಸಿರ್ ಹುಸೇನ್​ ಅವರು ಪಾಕಿಸ್ತಾನದ ಹಮ್ ಟಿವಿಯಲ್ಲಿ ದಿ ಆಫ್ಟರ್ ಮೂನ್ ಶೋನ ನಿರೂಪಕರಾಗಿ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಟಿವಿ ಮತ್ತು ರಂಗಭೂಮಿ ಕಲಾವಿದ ಕರಾಚಿ ಸೆ ಲಾಹೋರ್ (2015) ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ವಜಾಹತ್ ರೌಫ್ ನಿರ್ದೇಶನದ ಚಿತ್ರಕ್ಕೆ ಯಾಸಿರ್ ಕಥೆ ಬರೆದಿದ್ದಾರೆ. ಟಿವಿ ನಟ ಇಕ್ರಾ ಅಜೀಜ್ ಅವರನ್ನು ವಿವಾಹವಾದ ಯಾಸಿರ್ ಸದ್ಯ ಬಾಂಡಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!