Sunday, June 4, 2023

Latest Posts

ಪ್ರೊ ಕಬ್ಬಡಿ ಲೀಗ್‌: ಪುಣೇರಿ ಪಲ್ಟನ್‌ ವಿರುದ್ಧ ಬೆಂಗಳೂರು ಬುಲ್ಸ್‌ ಗೆ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾನುವಾರ ನಡೆದ ಪ್ರೊ ಕಬ್ಬಡಿ ಲೀಗ್‌ ನಲ್ಲಿ ಬೆಂಗಳೂರು ಬುಲ್ಸ್‌ ತಂಡ ಪುಣೇರಿ ಪಲ್ಟನ್‌ ತಂಡವನ್ನು ಮಣಿಸಿ ಭರ್ಜರಿ ಜಯ ಗಳಿಸಿದೆ. ಬೆಂಗಳೂರು ತಂಡದ ವಿರುದ್ಧ ಸೋತ ಪುಣೆ ಈಗ ಅಂಕಪಟ್ಟಿಯಲ್ಲಿ ಕೊನೆಸ್ಥಾನದಲ್ಲಿದೆ.
ನಿನ್ನೆ ಬೆಂಗಳೂರು ಬುಲ್ಸ್‌ ತಂಡ ಶುಭಾರಂಭ ಮಾಡಿತು. ಪವನ್‌ ಶರಾವತ್‌ 11 ಅಂಕ ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಇನ್ನು ಬೆಂಗಳೂರು ತಂಡ 23 ಅಂಕ ಗಳಿಸುವ ಮೂಲಕ ಪುಣೆಯನ್ನು 11 ಅಂಕಗಳಿಂದ ಸೋಲಿಸಿದೆ. ಈ ಮೂಲಕ 12 ದಿನಗಳ ನಂತರ ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 40-29 ಅಂಕಗಳಿಂದ ಪುಣೇರಿ ಪಲ್ಟನ್ ತಂಡವನ್ನು ಸೋಲಿಸಿದೆ. ವಿರಾಮದ ವೇಳೆಗೆ 13-18 ರಿಂದ ಹಿನ್ನಡೆಯಲ್ಲಿದ್ದ ಬೆಂಗಳೂರು ಬುಲ್ಸ್ ಆ ಬಳಿಕ ಅದ್ಭುತ ಪ್ರದರ್ಶನ ನೀಡುವ ಮೂಲಕ ಪುಣೇರಿ ತಂಡಕ್ಕೆ ತಿರುಗೇಟು ನೀಡಿ ಜಯ ಗಳಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!