ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಕೋಚ್ ರಾಹುಲ್ ದ್ರಾವಿಡ್ ತಂಡದ ಆಟಗಾರನೊಬ್ಬನ ಬಗ್ಗೆ ಮಾತನಾಡಿದ್ದಾರೆ.
ವಿರಾಟ್ ಕೋಹ್ಲಿ ಬ್ಯಾಟಿಂಗ್ ಈ ಬಾರಿ ಅತ್ಯುತ್ತಮವಾಗಿರಲಿದೆ. ಅವರ ಬ್ಯಾಟ್ ಶೀಘ್ರದಲ್ಲಿ ದೊಡ್ಡ ಸ್ಕೋರ್ ಕಾಣಲಿದೆ.ಅಂತೆಯೇ ಕೆ.ಎಲ್. ರಾಹುಲ್ ಕೂಡ ಫಾರ್ಮ್‌ನಲ್ಲಿದ್ದಾರೆ. ಆದರೆ ಇಲ್ಲಿ ಸ್ಟಾರ್ ಆಟಗಾರ ಆಗಬೇಕಿರುವುದು ಚೇತೇಶ್ವರ ಪೂಜಾರ ಎಂದು ಹೇಳಿದ್ದಾರೆ.
ಸತತ ಕಳಪೆ ಆಟದಿಂದ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಪೂರಾರ ಸೆಣೆಸಾಡುತ್ತಿದ್ದಾರೆ. ಆದರೆ ಇವರಲ್ಲಿ ರನ್ ಗಳಿಸುವ ದಾಹ ಇದೆ. ಇವರು ದೊಡ್ಡ ಮೊತ್ತ ಕಲೆಹಾಕಿದರೆ ತಂಡದ ಗೆಲುವು ಖಚಿತ ಎಂದಿದ್ದಾರೆ.
ಚಿಂತೆ ಮಾಡುವ ಬದಲು ಪೂಜಾರ ಆಡುವ ಕಡೆ ಹೆಚ್ಚು ಗಮನ ಕೊಡಬೇಕು. ದೊಡ್ಡ ಸ್ಕೋರ್ ಮಾಡಿದರೆ ಗೆಲುವು ಖಚಿತ ಎಂದಿದ್ದಾರೆ.