June 30, 2026
Tuesday, June 30, 2026
spot_img

1 ರೂಪಾಯಿಗೆ ಶೂ ಆಫರ್ ಕೇಳಿ ಅಂಗಡಿಗೆ ಮುಗಿಬಿದ್ದ ಜನ: ಪೊಲೀಸರಿಂದ ಲಾಠಿ ಚಾರ್ಜ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೋಝಿಕ್ಕೋಡ್ ನಲ್ಲಿ ಪಾದರಕ್ಷೆ ಅಂಗಡಿ ಕೇವಲ 1 ರೂಪಾಯಿಗೆ ಪ್ರೀಮಿಯಂ ಶೂಗಳನ್ನು ನೀಡುವುದಾಗಿ ಘೋಷಿಸಿ ನಡೆಸಿದ ಪ್ರಚಾರ ಅಭಿಯಾನ ಇಂದು ಭಾನುವಾರ ಬೆಳಗ್ಗೆ ಭಾರೀ ಜನಸಂದಣಿಗೆ ಕಾರಣವಾಗಿ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.

ವೈರಲ್ ಜಾಹೀರಾತುಗಳಿಂದ ಆಕರ್ಷಿತರಾದ ನೂರಾರು ಗ್ರಾಹಕರು ಮುಂಜಾನೆ ಅಂಗಡಿ ಮುಂದೆ ಜಮಾಯಿಸಿದರು. ಅಂಗಡಿ ಸಮೀಪದಲ್ಲಿ ಕಾಲ್ತುಳಿತ ಉಂಟಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿತ್ತು.

100 ಗ್ರಾಹಕರಿಗೆ ಹಳೆಯ 1 ರೂಪಾಯಿ ನೋಟು ತೋರಿಸಿದರೆ ಶೂ ನೀಡುವುದಾಗಿ ಜಾಹೀರಾತು ನೀಡಿದ್ದರಿಂದ ಜನರು ರಾತ್ರಿ 2 ಗಂಟೆಗೇ ಬಂದು ಕ್ಯೂ ನಿಂತಿದ್ದರು. ಕಾಲ್ತುಳಿತವನ್ನು ತಪ್ಪಿಸಲು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಅವ್ಯವಸ್ಥೆಯ ನಂತರ, ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ಅಂಗಡಿ ಮಾಲೀಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !