ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾವಚಿತ್ರದೊಂದಿಗೆ ಇರುಮುಡಿ ಹೊತ್ತು ಪಾದಯಾತ್ರೆ

ಹೊಸದಿಗಂತ ವರದಿ, ಕಲಬುರಗಿ:

ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ದಿ.ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಹಿಡಿದಕೊಂಡು ಶ್ರೀಶೈಲಕ್ಕೆ ಮಾಲಾಧಾರಿಗಳು ಪಾದಯಾತ್ರೆ ಆರಂಭಿಸಿದ್ದಾರೆ.
ಜಿಲ್ಲೆಯ ಸೇಡಂ ತಾಲೂಕಿನ ಹಿರನಪಲ್ಲಿ ಗ್ರಾಮದಿಂದ ಪ್ರತಿವರ್ಷ ಇರುಮುಡಿ ಹೊತ್ತು ಶ್ರೀಶೈಲಕ್ಕೆ ಗ್ರಾಮಸ್ಥರಿಂದ ಹೋಗುತ್ತಾರೆ. ಈ ವಷ೯ ನಟ ಪುನೀತ್ ರಾಜಕುಮಾರ್ ಅಭಿಮಾನಿಗಳು ಅವರ ಭಾವಚಿತ್ರವನ್ನು ಹಿಡಿದು ಪಾದಯಾತ್ರೆ ಪ್ರಾರಂಭಿಸಿದ್ದಾರೆ.
ಈ ಬಾರಿ 29 ಜನ ಭಕ್ತರಿಂದ ಇರುಮುಡಿ ಹೊತ್ತು ಶ್ರೀಶೈಲಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪ್ರತಿ ವಷ೯ ಯುಗಾದಿ ದಿನದಂದು ಶ್ರೀಶೈಲ ಮಲ್ಲಿಕಾರ್ಜುನ ಸನ್ನಿಧಿಯಲ್ಲಿ ರಥೋತ್ಸವ ನಡೆಯುತ್ತದೆ. ಹೀಗಾಗಿ ದೇಶದ ವಿವಿಧ ಮೂಲೆಗಳಿಂದ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿಲಿ೯ಂಗದ ದಶ೯ನಕ್ಕೆಂದು ಪಾದಯಾತ್ರೆ ಬೆಳೆಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!