ನವಸಾರಿಯಲ್ಲಿ ಬಸ್ ಮತ್ತು ಎಸ್‌ಯುವಿ ನಡುವೆ ಅಪಘಾತ: 9 ಸಾವು, 32 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶನಿವಾರ ನಸುಕಿನ ವೇಳೆ ಗುಜರಾತ್‌ನ ನವಸಾರಿಯಲ್ಲಿ ಬಸ್ ಮತ್ತು ಎಸ್‌ಯುವಿ ನಡುವೆ ಡಿಕ್ಕಿ ಸಂಭವಿಸಿ ಒಂಬತ್ತು ಜನರು ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡ 32 ಮಂದಿಯಲ್ಲಿ 17 ಮಂದಿಯನ್ನು ವಲ್ಸಾದ್‌ನ ಆಸ್ಪತ್ರೆಗೆ, 14 ಮಂದಿಯನ್ನು ನವಸಾರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಇನ್ನೊಬ್ಬ ಗಾಯಾಳುವನ್ನು ಚಿಕಿತ್ಸೆಗಾಗಿ ಸೂರತ್‌ಗೆ ಕರೆದೊಯ್ಯಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೇತನ್ ಜೋಶಿ ತಿಳಿಸಿದ್ದಾರೆ.

ಒಂಭತ್ತು ಮೃತದೇಹಗಳನ್ನು ಪೊಲೀಸ್ ತಂಡಗಳು ಹೊರತೆಗೆದು ಶವಪರೀಕ್ಷೆಗೆ ಕೊಂಡೊಯ್ಯಲಾಗಿದೆ. ಎಸ್‌ಯುವಿ (ಫಾರ್ಚುನರ್) ಅಂಕಲೇಶ್ವರದ ಸಂಸ್ಥೆಯೊಂದರ ಒಂಭತ್ತು ಉದ್ಯೋಗಿಗಳನ್ನು ಹೊತ್ತೊಯ್ಯುತ್ತಿತ್ತು ಮತ್ತು ಬಸ್ ಪ್ರಯಾಣಿಕರೊಂದಿಗೆ ಅಹಮದಾಬಾದ್‌ನಿಂದ ವಲ್ಸಾದ್‌ಗೆ ತೆರಳುತ್ತಿದ್ದಾಗಿ ಹೇಳಿದರು.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!