ಕಾಂಗ್ರೆಸ್ ನವರು ಮೋದಿಯನ್ನು ದ್ವೇಷಿಸಿದಷ್ಟು ಜನರು ಮೋದಿಯವರನ್ನು ಪ್ರೀತಿ‌ಸುತ್ತಾರೆ: ಜೋಶಿ

ಹೊಸದಿಗಂತ , ಹುಬ್ಬಳ್ಳಿ:

ದೇಶದ ಅಭಿವೃದ್ಧಿ ಮಾಡುತ್ತಿರುವ ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್ ನಾಯಕರು ದ್ವೇಷಿಸುತ್ತಿದ್ದಾರೆ. ಅವರು ದ್ವೇಷಿಸಿದಷ್ಟು ದೇಶದ ಜನರು ಮೋದಿ ಅವರನ್ನು ಪ್ರೀತಿ‌ಸುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು ದ್ವೇಷಿಸುತ್ತಲೇ ಇದ್ದೀರಿ. ನಿಮ್ಮ ಕೈಯಲ್ಲಿ ಅದೆಷ್ಟು ಶಕ್ತಿ ಇದೆ? ತೋರಿಸಿಬಿಡಿ ಒಂದುಸಾರಿ ನೋಡೋಣ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.

ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಒಬ್ಬೊಬ್ಬರೇ ನಾಯಕರು ನರೇಂದ್ರ ಮೋದಿ ಅವರ ಮೇಲೆ ದ್ವೇಷ ಕಾರುತ್ತಿದ್ದಾರೆ. ಸೇಡಿನ ಮನೋಭಾವ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಮೋದಿ ಅವರನ್ನು ದೇಶದ ಪ್ರಧಾನಿ ಎಂದೂ ನೋಡದೆ, ಏಕ ವಚನದಲ್ಲಿ ಮಾತನಾಡಿದರು. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮೋದಿ ಮೋದಿ ಎಂದೂ ಜೈಕಾರ ಹಾಕುವ ಯುವ ಪಡೆಗೆ ಕಪಾಳಕ್ಕೆ ಹೊಡೆಯಿರಿ ಎಂದು ಪ್ರಚೋದನಕಾರಿ ಕರೆ ಕೊಟ್ಟಿದ್ದಾರೆ. ಈ ಮೂಲಕ ಕರುನಾಡ ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!