September 17, 2026
Thursday, September 17, 2026
spot_img

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಶುಭ ಸುದ್ದಿ ಸಿಗಲಿದೆ, ಒತ್ತಡಕ್ಕೆ ಪರಿಹಾರ ಸಿಗಲಿದೆ

ಮೇಷ
ಶುಭ ಸುದ್ದಿ ಕೇಳಿ ಬಂದೀತು. ವೃತ್ತಿ ಸಂಬಂಧ ಒತ್ತಡ ಪರಿಹಾರ. ನಿಮ್ಮ ನಿರ್ವಹಣೆ ಉತ್ತಮ ಪಡಿಸಿಕೊಳ್ಳಲು ಯತ್ನಿಸಿ. ಆರ್ಥಿಕ ಉನ್ನತಿ.                
ವೃಷಭ
ಅಹಿತಕರ ಪ್ರಸಂಗ. ಆತ್ಮವಿಶ್ವಾಸಕ್ಕೆ ಕುಂದು. ನಿರ್ಭೀತಿಯಿಂದ ಕಾರ್ಯ ನಿರ್ವಹಿಸಿ. ಈ ಬಗ್ಗೆ ಇತರರಿಗೆ ವಿವರಣೆ ಕೊಡುವ  ಅಗತ್ಯ ಇಲ್ಲ.  
ಮಿಥುನ
ಆರ್ಥಿಕವಾಗಿ ಫಲಪ್ರದ ದಿನ. ಇತರರು ಹರಡುವ ವದಂತಿಗೆ ಕಿವಿಗೊಡಬೇಡಿ. ಆತ್ಮೀಯ ಬಂಧುಮಿತ್ರರ ಕಾಣುವ ಅವಕಾಶ ಸಿಗಲಿದೆ.    
ಕಟಕ
ಮನದ ಶಾಂತಿ ಕಾಯಲು ಸಂಘರ್ಷ ಗಳಿಂದ ದೂರವಿರಿ. ಸವಾಲು ಎದುರಿಸುವ ತಾಕತ್ತು ನಿಮಗಿದೆ, ಧೈರ್ಯ ಬೇಕು ಅಷ್ಟೆ.          
ಸಿಂಹ
ಹಣದ ಕೊರತೆ ನೀಗಲಿದೆ. ಸಂಬಂಧದಲ್ಲಿ ಯಾವುದೇ ಅನುಮಾನ ಉಳಿಯದಿರಲಿ. ಎಲ್ಲವನ್ನು ಸ್ಪಷ್ಟಪಡಿಸಿಕೊಳ್ಳಿ. ಬಂಧು ಜತೆ ವಿರಸವಾದೀತು.
ಕನ್ಯಾ
ಆತ್ಮವಿಶ್ವಾಸ ಹೆಚ್ಚಿ ಸುವ ಪ್ರಸಂಗ. ಭಾವುಕತೆ ಬಿಟ್ಟು ಪ್ರಾಯೋಗಿಕ ನೆಲೆಯಲ್ಲಿ ಚಿಂತಿಸಿ. ಆಗ ನಿಮ್ಮನ್ನು ಕಾಡುವ ಸಮಸ್ಯೆ ಇತ್ಯರ್ಥವಾದೀತು.  
ತುಲಾ
ನಾಯಕತ್ವದ ಗುಣ ಪ್ರದರ್ಶಿಸುವ ಪ್ರಸಂಗ ಬರಲಿದೆ. ದಿಟ್ಟ ನಿರ್ಧಾರ ತಾಳಲು ಹಿಂಜರಿಕೆ ತೋರದಿರಿ. ಕೌಟುಂಬಿಕ ಅಸಹಕಾರ ಸಂಭವ.      
ವೃಶ್ಚಿಕ
ಅಸಹನೀಯ ಸನ್ನಿವೇಶ ಎದುರಿಸುವ ಪ್ರಸಂಗ ಬಂದೀತು. ತಕ್ಷಣ ಭಾವಾವೇಶದಿಂದ ಪ್ರತಿಕ್ರಿಯಿಸದಿರಿ. ತಾಳ್ಮೆಯಿಂದ ನಿಭಾಯಿಸಿ.          
ಧನು
ಸಿಹಿ-ಕಹಿ ಎರಡೂ ಪ್ರಸಂಗ ಎದುರಿಸುವಿರಿ.ವಾಗ್ವಾದದಿಂದ ದೂರ ಇರುವುದೇ ಒಳಿತು. ಆಪ್ತರ ಜತೆ ಪ್ರವಾಸ ಹೊರಡುವ ಅವಕಾಶ.          
ಮಕರ
ಸಣ್ಣ ಸಮಸ್ಯೆ ಯೆಂದು ನಿರ್ಲಕ್ಷ್ಯ ತೋರಬೇಡಿ. ಅದರಿಂದ ದೊಡ್ಡ ಪರಿಣಾಮ ಉಂಟಾದೀತು. ಅಸಂತೃಪ್ತಿ ಕಾಡಲಿದೆ.  
ಕುಂಭ
ಹೊಸ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುವಿರಿ. ನಿಮ್ಮ ದೀರ್ಘ ಅನುಭವ ನೆರವಿಗೆ ಬರಲಿದೆ. ಹಣದ ಸಮಸ್ಯೆ ನಿವಾರಣೆ.  
ಮೀನ
ನಿಮ್ಮ ಭಾವನೆ ಸ್ಪಷ್ಟವಾಗಿ ವ್ಯಕ್ತಪಡಿಸಿ. ಅದಕ್ಕೆ ಮುಜುಗರ ಬೇಕಿಲ್ಲ. ಗೊಂದಲಕ್ಕೆ ಆಸ್ಪದ ನೀಡಬೇಡಿ. ಹಣಕಾಸು ಒತ್ತಡ ಎದುರಿಸುವಿರಿ.   

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !