ಕೃಷ್ಣಾ ತೀರದಲ್ಲಿ ಚಿರತೆ ಹಾವಳಿಗೆ ಜನರು ತತ್ತರ

ಹೊಸದಿಗಂತ ವರದಿ ವಿಜಯಪುರ:
ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾ ತೀರದ ದೇವರಗೆಣ್ಣೂರ ಗ್ರಾಮದ ಜನರು ಚಿರತೆ ಹಾವಳಿಯ ಭೀತಿಯಿಂದ ಕಂಗಾಲಾಗಿದ್ದಾರೆ.
ಚಿರತೆ ಆಡೊಂದನ್ನು ಹಿಡಿದು, ಕಬ್ಬಿನ ಜಮೀನಿಗೆ ನುಗ್ಗಿ ಕಣ್ಮರೆಯಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಇದರಿಂದ ದೇವರಗೆಣ್ಣೂರ, ಬಬಲಾದಿ ಭಾಗದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಇದರಿಂದ ಗ್ರಾಮಸ್ಥರು ಜಮೀನಿಗೆ ತೆರಳಲು ಭಯಭೀತರಾಗಿದ್ದಾರೆ.
ಹಿಂದೊಮ್ಮೆ ಈ ಭಾಗದಲ್ಲಿ ಚಿರತೆ ಕಂಡು ಬಂದು, ದನ, ಕರುಗಳನ್ನು ಎಳೆದೊಯ್ದು ಸಾರ್ವಜನಿಕರಲ್ಲಿ ಸಾಕಷ್ಟು ಭೀತಿ ಮೂಡಿಸಿತ್ತು. ಅನಂತರ ಅರಣ್ಯಾಧಿಕಾರಿಗಳು ಅದನ್ನು ಬೋನ್‌ಗೆ ಕೆಡುವುದರ ಮೂಲಕ ಸೆರೆ ಹಿಡಿದಿದ್ದರು. ಸದ್ಯ ಮತ್ತೆ ಚಿರತೆ ಹಾವಳಿ ಕೇಳಿ ಬರುತ್ತಿದ್ದು, ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಬೋನ್ ಇಟ್ಟು, ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!