ಗಿಲ್ಗಿಟ್-ಬಾಲ್ಟಿಸ್ತಾನ್‌ನಲ್ಲಿ ಪಾಕ್‌ ಬಲವಂತದ ಭೂಸ್ವಾಧೀನ: ಜನರ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆ ಸಲುವಾಗಿ ಹೊಸ ಘಟಕದ ಮೂಲ ಸೌಕರ್ಯಗಳ ಸ್ಥಾಪನೆಗಾಗಿ ಪಾಕ್‌ ಆಕ್ರಮಿತ ಗಿಲ್ಗಿಟ್-‌ ಬಾಲ್ಟಿಸ್ತಾನ್‌ ಪ್ರದೇಶದ ಹಳ್ಳಿಗಳನ್ನು ವಶಪಡಿಸಿಕೊಂಡಿರುವುದರ ವಿರುದ್ಧ ಸ್ಥಳೀಯರು ಧರಣಿ ನಡೆಸುತ್ತಿದ್ದಾರೆ. ತಮ್ಮ ಪಿತ್ರಾರ್ಜಿತ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡು ಖಾಸಗಿ ಕಾಂಟ್ರಾಕ್ಟರ್‌ಗಳಿಗೆ ಲೀಜ್‌ಗೆ ನೀಡುತ್ತಿರುವ ಕಾರಣದಿಂದಾಗಿ ಪಾಕ್‌ ಸೇನೆ ವಿರುದ್ಧ ಧ್ವನಿಯೆತ್ತಿದ್ದಾರೆ ಅಲ್ಲಿನ ಜನ.
ಕೂಡಲೇ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸ್ಥಳ ವಿವಾದದಿಂದ ಕೂಡಿದೆ. ಪಾಕಿಸ್ತಾನ ಅಕ್ರಮವಾಗಿ ನಮ್ಮ ಜಾಗವನ್ನು ಆಕ್ರಮಣ ಮಾಡಿಕೊಂಡಿದೆ ಎಂಬ ಆರೋಪಗಳನ್ನು ಮಾಡಿದ್ರು. ಥಕ್‌ ದಾಸ್‌ ಹಾಗೂ ಮಕ್ಪೂನ್‌ ದಾಸ್‌ ಎಂಬಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಅಲ್ಲಿನ ವಾತಾವರಣ ಬೂದಿ ಮುಚ್ಚಿದ ಕೆಂಡದಂತೆ ಮಾರ್ಪಟ್ಟಿದೆ. ಅಲ್ಲಿನ ಜನ, ಜಾನುವಾರುಗಳನ್ನು ವಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. , ಮನೆಗಳನ್ನು ನೆಲಸಮ ಮಾಡಿದ್ದಾರೆ. ಪಾಕ್‌ ಸೇನೆ ವಿರುದ್ಧ ಧ್ವನಿಯೆತ್ತಿದವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸುಮಾರು 200ಕ್ಕೂ ಹೆಚ್ಚು ಜನರಿಗೆ ವಾರೆಂಟ್‌ ಜಾರಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!