Photo Gallery| ತವರಿನ ಜಾಮ್‌ನಗರದಲ್ಲಿ ಪಿಎಂ ಮೋದಿಗೆ ಸಿಕ್ಕ ಜನರ ಪ್ರೀತಿ ಎಷ್ಟಿತ್ತು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿವಿಧ ಯೋಜೆನಗಳ ಉದ್ಘಾಟನೆ, ಸಂಕುಸ್ಥಾಪನೆ ಮಾಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಗುಜರಾತ್‌, ಮಧ್ಯಪ್ರದೇಶ ಪ್ರವಾಸದಲ್ಲಿದ್ದಾರೆ. ಈ ವೇಳೆ ನಿನ್ನೆ ಅಕ್ಟೋಬರ್ 10, 2022 ರಂದು ಗುಜರಾತ್‌ನ ಜಾಮ್‌ನಗಕ್ಕೆ ಭೇಟಿ ಕೊಟ್ಟ ಪ್ರಧಾನಿಗೆ ತನ್ನ ತವರಿನ ಜನತೆ ನೀಡಿದ ಪ್ರೀತಿ ಎಷ್ಟಿತ್ತು ಅಂತ ನೀವೇ ನೋಡಿ.

ಪುಟ್ಟ ಮಕ್ಕಳು, ಹಿರಿಯರು, ಕಿರಿಯರೆನ್ನದೆ ಪ್ರಧಾನಿಗಾಗಿ ರಸ್ತೆ ಇಕ್ಕೆಲಗಳಲ್ಲಿ ಜನ ಕ್ರೂ ಕಟ್ಟಿದ್ದರು. ಮೋದಿ ಮೋದಿ ಎಂಬ ಘೋಷಣೆ ಮೊಳಗತೊಡಗಿದ್ದವು. ಜಾಮ್‌ನಗರದಲ್ಲಿ ವಾಸಿಸುವ ಬಿಹಾರದ ರಾಜ್ಯದ ಜನತೆ ಮತ್ತೊಮ್ಮೆ ಮೋದಿ ಎಂಬ ಸಂದೇಶ ಕಾರ್ಡ್‌ ಹಿಡಿದಿದ್ದರು. ಮೋದಿ ನೋಡಲು ಪುಟ್ಟ ಬಾಲಕ ತನ್ನ ತಂದೆಯ ಹೆಗಲ ಮೇಲೆ ಕೂತು ಕೈ ಸನೆ ಮಾಡಿದ್ದಾನೆ. ಮೋದಿಗೆ ನೆನಪಿಗಾಗಿ ಅವರ ಫೋಟೋ ಆಟೋಗ್ರಾಫ್‌ ಮುಗಿಬಿದ್ದ ಅಭಿಮಾನಿಗಳು ಹೀಗೆ ಒಂದಾ..ಎರಡಾ ರಸ್ತೆಯುದ್ದಕ್ಕೂ ಮೋದಿಗಾಗಿ ಜನರ ಕಾತರ ಹೇಗಿದೆ ನೋಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!