ಈ ಮೂರು ಸಮಸ್ಯೆ ಇರುವವರು ಕಲ್ಲಂಗಡಿ ಹಣ್ಣು ತಿನ್ನಲೇ ಬಾರದು…

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಕಲ್ಲಂಗಡಿ ಎಂದರೆ ಬಾಯಲ್ಲಿ ನೀರೂರುವುದು ಸಹಜ. ಅತ್ಯಂತ ಸುಂದರವಾದ ಕಲ್ಲಂಗಡಿ ಹಣ್ಣು ಅಷ್ಟೇ ರುಚಿಕರ. ಆದರೆ ಈ ರೋಗ ಉಳ್ಳವರು ಮಾತ್ರ ಕಲ್ಲಂಗಡಿ ಹಣ್ಣು ಸೇವಿಸಲೇ ಬಾರದು.

ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಹೇರಳವಾಗಿದೆ. ಸಾಕಷ್ಟು ಪ್ರಮಾಣದ ಪೋಷಕಾಂಶಗಳೂ ಕಂಡುಬರುತ್ತದೆ.ಖನಿಜಗಳು, ವಿಟಮಿನ್, ಆಂಟಿ ಆಕ್ಸಿಡೆಂಡ್‌ಗಳು ಹೇರಳವಾಗಿ ಈ ಹಣ್ಣಿನಲ್ಲಿದೆ. ಅನೇಕ ರೋಗಗಳಿಗೂ ಇದು ರಾಮಬಾಣ. ಆದರೆ ಈ ರೋಗ ಉಳ್ಳವರು ಮಾತ್ರ ಇದನ್ನು ಸೇವಿಸಲೇ ಬಾರದು!

ಹೃದಯ ರೋಗ ಉಳ್ಳವರು ಕಲ್ಲಂಗಡಿಯಿಂದ ದೂರವಿರಲೇ ಬೇಕು. ಈ ಹಣ್ಣಿನಲ್ಲಿ ಪೊಟ್ಯಾಶ್ ಅಂಶ ಸಮೃದ್ಧವಾಗಿದೆ. ಹೃದಯ ರೊಗವುಳ್ಳವರು ಕಲ್ಲಂಗಡಿ ತಿಂದರೆ ಈ ಅಂಶ ದೇಹದಲ್ಲಿ ಹೆಚ್ಚಾಗಿ ಹೃದಯ ಬಡಿತ ಹೆಚ್ಚಳವಾಗುವುದಲ್ಲದೆ ನಾಡಿ ದುರ್ಬಲವಾಗುವ ಸಮಸ್ಯೆ ತಲೆದೋರಲು ಸಾಧ್ಯವಿದೆ. ಶೀತ ಸಮಸ್ಯೆ ಉಳ್ಳವರು ಸಹ ಕಲ್ಲಂಗಡಿ ತಿನ್ನಲೇ ಬಾರದು. ಮಧುಮೇಹ ಸಮಸ್ಯೆ ಉಳ್ಳವರು ಈ ಹಣ್ಣಿನಿಂದ ದೂರವಿರುವುದು ತುಂಬಾನೇ ಮುಖ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!