ಹಿಂದೂ ಸಂಪ್ರದಾಯದಂತೆ ಸಾಕುನಾಯಿಗಳ ಮದುವೆ, ಅದ್ದೂರಿ ಮದುವೆಯಲ್ಲಿ 500 ಮಂದಿ ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಹಿಂದೂ ಸಂಪ್ರದಾಯದಂತೆ ಎರಡು ಸಾಕು ನಾಯಿಗಳಿಗೆ ವಿವಾಹ ನಡೆದಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮನುಷ್ಯರ ಮಾಡಿಕೊಳ್ಳುವ ಮದುವೆಯ ಹಾಗೇ ಸಕಲ ಶಾಸ್ತ್ರಗಳು, ಬಾಜಾ ಭಜಂತ್ರಿಗಳೊಂದಿಗೆ ಮದುವೆ ನಡೆದಿದೆ. ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಭಾರುವ ಸುಮೇರ್‌ಪುರ ಗ್ರಾಮದಲ್ಲಿನ ಒಂದು ಗಂಡು ನಾಯಿ ಮತ್ತು ಹೆಣ್ಣು ನಾಯಿಗೆ ಮದುವೆಯಾಗಿದೆ.

ಸೌಂಖರ್ ಅರಣ್ಯದಲ್ಲಿರುವ ಮಾನಸರ್ ಬಾಬಾ ಶಿವ ಮಂದಿರದ ಅರ್ಚಕ ದ್ವಾರಕಾ ದಾಸ್ ಮಹಾರಾಜ್ ಅವರು ತಮ್ಮ ಮುದ್ದಿನ ನಾಯಿಗೆ, ಪರಾಚ್‌ನಲ್ಲಿರುವ ಬಜರಂಗಬಲಿ ದೇವಸ್ಥಾನದ ಅರ್ಚಕ ಅರ್ಜುನ್ ದಾಸ್ ಅವರ ಹೆಣ್ಣು ನಾಯಿಯನ್ನು ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದಾರೆ. ಜೂನ್ 5 ರಂದು, ಶಿಷ್ಯರು ಮತ್ತು ಸ್ಥಳೀಯ ಜನರ ಸಮ್ಮುಖದಲ್ಲಿ ಸಾಕು ನಾಯಿಗಳಿಗೆ ಹಿಂದೂ ವಿವಾಹ ಸಂಪ್ರದಾಯಗಳ ಪ್ರಕಾರ ಮದುವೆ ಮಾಡಲಾಯಿತು.

ಮಾನಸರ್  ಬಾಬಾ ಶಿವ ದೇವಾಲಯದಿಂದ ಸೌಂಖರ್ ಗ್ರಾಮದ ಬೀದಿಗಳಲ್ಲಿ ಬೃಹತ್ ವಿವಾಹ ಮೆರವಣಿಗೆ ಮೂಲಕ ಮೌದಾಹಾ ಪ್ರದೇಶದ ಪರಾಚ್‌ ಗ್ರಾಮವನ್ನು ತಲುಪಿತು. ಎರಡೂ ನಾಯಿಗಳಿಗೆ ಹೊಸ ಬಟ್ಟೆ ತೊಡಿಸಿ, ಚಿನ್ನ ಬೆಳ್ಳಿ ಆಭರಣಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆಯಲ್ಲಿ 500 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಮದುವೆಯ ನಂತರ ಊಟದ ವ್ಯವಸ್ಥೆ ಕೂಡಾ ಮಾಡಲಾಗಿತ್ತು. ಈ ಔತಣಕೂಟದಲ್ಲಿ ಹತ್ತು ಹಲವು ಬಗೆಯ ಖಾದ್ಯಗಳನ್ನು ಅತಿಥಿಗಳಿಗೆ ಬಡಿಸಲಾಯಿತು. ಶ್ರೀಮಂತರ ಮನೆಗಳಲ್ಲಿ ನಡೆಯುವ ಮದುವೆಯನ್ನು ಹೋಲುವಂತೆ ಸಾಕು ನಾಯಿಗಳ ಮದುವೆ ನಡೆದಿರುವುದು ಸ್ಥಳೀಯರನ್ನ ಆಶ್ಚರ್ಯಕ್ಕೆ ಗುರಿಮಾಡಿದೆ. ಅಷ್ಟೇ ಅಲ್ಲ ಮದುವೆಗೆ ಬಂದ ನೆಂಟರು ನಾಯಿಗಳಿಗೆ 11,000 ರೂ. ಗಿಫ್ಟ್‌ ಕೊಟ್ಟಿದ್ದಾರಂತೆ. ಈ ವಿಚಾರ ಎಲ್ಲೆಡೆ ಸುದ್ದಿಯಾಗಿದ್ದು, ಪ್ರಾಣಿಗಳಿಗೆ ವಿವಾಹ ಮಾಡುವುದು ಟ್ರೆಂಡ್‌ ಆಗಿದೆ ಎಂದು ಕಮೆಂಟ್‌ಗಳು ಹರಿದಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!