ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಫೋಟೊಗಳು ಹೇಗಾದ್ರೂ ಇರಲಿ, ಪ್ರೀ ವೆಡ್ಡಿಂಗ್ ಫೋಟೊಗಳು ಚೆನ್ನಾಗಿದ್ರೆ ಸಾಕು ಅನ್ನೋ ಕಾಲಕ್ಕೆ ನಾವು ಬಂದಿದ್ದೀವಿ.
ಪ್ರೀ ವೆಡ್ಡಿಂಗ್ ಫೋಟೊಶೂಟ್‌ಗಳಿಗಾಗಿ ಜನ ಸಿಕ್ಕಾಪಟ್ಟೆ ಕ್ರಿಯೇಟೀವ್ ಆಗುತ್ತಾರೆ. ನಮ್ಮ ಶೂಟ್ ವಿಭಿನ್ನವಾಗಿರಲಿ ಅಂತ ಏನೇನೋ ಸಾಹಸ ಮಾಡುತ್ತಾರೆ. ನೀರಲ್ಲಿ, ಬೆಟ್ಟದ ಮೇಲೆ, ರೆಸಾರ್ಟ್‌ನಲ್ಲಿ, ಕೋಟೆಯೊಳಗೆ ಹೀಗೆ ಎಲ್ಲಾ ಜಾಗದಲ್ಲೂ ಶೂಟ್ ಮುಗಿಸಿ ಇದೀಗ ಇಲ್ಲೊಂದು ಜೋಡಿ ಕೆಸರಿನ ಮಧ್ಯೆ ಶೂಟ್ ಮಾಡಿಸಿದೆ.
ಸುಂದರವಾದ ಬಿಳಿ ಗೌನ್‌ನ್ನು ಕೆಸರು ಮಾಡಿಕೊಂಡಿರೋ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಜಕಿಸ್ತಾನದ ಮುರಾತ್ ಹಾಗೂ ಕಮಿಲ್ಲಾ ಕೆಸರಿನಲ್ಲಿ ಫೋಟೊ ಶೂಟ್ ಮಾಡಿಸಿಕೊಂಡು ಫೇಮಸ್ ಆಗಿದ್ದಾರೆ.