April 29, 2026
Wednesday, April 29, 2026
spot_img

ಕೇರಳದಲ್ಲಿ ಪಿಣರಾಯಿ ಹ್ಯಾಟ್ರಿಕ್ ಕನಸು ಭಗ್ನ: ಈ ಬಾರಿ ಅಧಿಕಾರದ ಗದ್ದುಗೆಗೆ ಯುಡಿಎಫ್‌ ಏರಲಿದೆ ಎಂದ ಸಮೀಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಮತದಾನ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಳ್ಳಲು ಆರಂಭಗೊಂಡಿದೆ. ದೇವರ ಸ್ವಂತ ನಾಡು ಕೇರಳದಲ್ಲಿ ಈ ಬಾರಿ ಆಡಳಿತಾರೂಢ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್ ಸರಕಾರದ ಮೂರನೇ ಅವಧಿಯ ಅಧಿಕಾರದ ಕನಸು ಛಿದ್ರಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಕೇರಳ ವಿಧಾನಸಭೆಯ ಒಟ್ಟು 140 ಸ್ಥಾನಗಳಲ್ಲಿ ಬಹುಮತಕ್ಕೆ 70 ಸ್ಥಾನಗಳ ಅಗತ್ಯವಿದೆ.

ಅಕ್ಸಿಸ್ ಮೈ ಇಂಡಿಯಾ
ಯುಡಿಎಫ್ : 78-90 ಸ್ಥಾನಗಳು
ಎಲ್‌ಡಿಎಫ್: 49-62 ಸ್ಥಾನಗಳು
ಬಿಜೆಪಿ+ 0-3 ಸ್ಥಾನಗಳು

ಪೀಪಲ್ಸ್ ಪಲ್ಸ್
ಯುಡಿಎಫ್ : 75-85 ಸ್ಥಾನಗಳು
ಎಲ್‌ಡಿಎಫ್: 55-65 ಸ್ಥಾನಗಳು
ಬಿಜೆಪಿ+: 0-3 ಸ್ಥಾನಗಳು
ಇತರೆ: 0

ಪಿ-ಮಾರ್ಕ್
ಯುಡಿಎಫ್ : 71-79 ಸ್ಥಾನಗಳು
ಎಲ್‌ಡಿಎಫ್ : 62-69 ಸ್ಥಾನಗಳು
ಬಿಜೆಪಿ+: 1-4 ಸ್ಥಾನಗಳು
ಇತರೆ: 0-3 ಸ್ಥಾನಗಳು

ಮ್ಯಾಟ್ರಿಜ್
ಯುಡಿಎಫ್: 70-75 ಸ್ಥಾನಗಳು
ಎಲ್‌ಡಿಎಫ್: 60-65 ಸ್ಥಾನಗಳು
ಬಿಜೆಪಿ+: 3-5 ಸ್ಥಾನಗಳು
ಇತರೆ: 2-4 ಸ್ಥಾನಗಳು

    ಪೋಲ್ ಆಫ್ ಎಕ್ಸಿಟ್ ಪೊಲ್ಸ್
    ಯುಡಿಎಫ್: 77 (ಸ್ಪಷ್ಟ ಬಹುಮತ)
    ಎಲ್‌ಡಿಎಫ್: 60
    ಬಿಜೆಪಿ+: 02
    ಇತರೆ: 01

    Must Read

    error: Copy ಬೇಡ, Coffee ಜೊತೆ ಹಂಚಿಕೊಳ್ಳಿ !