ಪ್ರಧಾನಿ ಮೋದಿ ಪಂಜಾಬ್‌ ಭೇಟಿ ವೇಳೆ ಉಗ್ರ ದಾಳಿಗೆ ಸಂಚು: ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಗುಪ್ತಚರ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 24 ರಂದು ಪಂಜಾಬ್‌ನ ಮೊಹಾಲಿಗೆ ಬೇಟಿ ನೀಡುತ್ತಿದ್ದು, ಅಲ್ಲಿ ಟಾಟಾ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ಪಂಜಾಬ್‌ನಲ್ಲಿ ಉಗ್ರರ ದಾಳಿ ಭೀತಿ ಎಚ್ಚರಿಕೆ ಬಂದಿದೆ.

ಹೌದು, ಮೋದಿ ಭೇಟಿ ನೀಡುತ್ತಿರುವ ಮೊಹಾಲಿ ಹಾಗೂ ಚಂಡೀಘಡಲ್ಲಿ ಉಗ್ರರ ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಭಾರತದ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಚಂಡೀಘಡ, ಮೊಹಾಲಿ ಬಸ್ ಸ್ಟಾಂಡ್‌ನಲ್ಲಿ ಬಾಂಬ್ ಸ್ಫೋಟ ಸೇರಿದಂತೆ ಕೆಲ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ಸಂದೇಶ ಹೊರಬಿದ್ದಿದೆ. ಇದರ ಬೆನ್ನಲ್ಲೇ ಪಂಜಾಬ್ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದೆ.

ಪ್ರಧಾನಿ ಮೋದಿ ಸೇರಿ 10 ನಾಯಕರ ಟಾರ್ಗೆಟ್ ಲಿಸ್ಟ್‌ನಲ್ಲಿದ್ದಾರೆ ಅನ್ನೋ ಸ್ಫೋಟಕ ಮಾಹಿಯನ್ನು ಗುಪ್ತಚರ ಸಂಸ್ಥೆ ಬಹಿರಂಗ ಪಡಿಸಿದೆ.
ಪಾಕಿಸ್ತಾನದ ಇಂಟೆಲಿಜೆನ್ಸ್ ಎಜೆನ್ಸಿ ಪಂಜಾಬ್‌ನಲ್ಲಿ ಭಯೋತ್ಪದನಾ ದಾಳಿಗೆ ಸಂಚು ರೂಪಿಸಿದೆ. ಭಾರತದಲ್ಲಿ ಬಿಜೆಪಿ ಸರ್ಕಾರದಿಂದ ಭಯದ ವಾತಾವರಣ ಸೃಷ್ಟಿಯಾಗಿದೆ ಎಂಬುದನ್ನು ಬಂಬಿಸಿಲು ಪಾಕಿಸ್ತಾನ ಐಎಸ್‌ಐ ಭಾರಿ ಸಂಚು ರೂಪಿಸಿರುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಮಾಜಿ ಉಪ ಮುಖ್ಯಮಂತ್ರಿ ಸುಖಜಿಂದರ್ ರಾಂಧವಾ, ಮಾಜಿ ಸಚಿವ ಗುರುಕೀರತ್ ಕೊಟ್ಲಿ, ವಿಜಯಿಂದರರ್ ಸಿಂಗ್ಲಾ, ಪರ್ಮಿಂದರ್ ಪಿಂಕ್ ಸೇರಿದಂತೆ 10 ರಾಜಕೀಯ ನಾಯಕರು ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿದ್ದಾರೆ ಅನ್ನೋ ಮಾಹಿತಿಯನ್ನು ಗುಪ್ತಚರ ಇಲಾಖೆ ಹೇಳಿದೆ. ಈ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಪಂಜಾಬ್ ಪೊಲೀಸ್‌ಗೆ ರವಾನಿಸಿದೆ.

ಇತ್ತೀಚೆಗೆ ಪಂಜಾಬ್‌ನಲ್ಲಿ ಭಾರಿ ಉಗ್ರ ದಾಳಿಗೆ ಸಂಚು ರೂಪಿಸಿದ್ದ ಐಸಿಸ್, ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಉಗ್ರ ಸಂಘಟನೆಗಳ ಭಯೋತ್ಪಾದಕರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು. ಬಂಧಿತರಿಂದ 3 ಹ್ಯಾಂಡ್‌ ಗ್ರೆನೇಡ್‌, 1 ಸುಧಾರಿತ ಸ್ಫೋಟಕ ಸಾಮಗ್ರಿ, 2 ಪಿಸ್ತೂಲ್‌ ಹಾಗೂ 40 ಸಿಡಿಮದ್ದು ವಶಪಡಿಸಿಕೊಳ್ಳಲಾಗಿದೆ. ಇವರು ಕೆನಡಾ ಮೂಲದ ಆಶ್‌ರ್‍ ದಲ್ಲಾ ಹಾಗೂ ಆಸ್ಪ್ರೇಲಿಯಾ ಮೂಲದ ಗುರ್ಜಂತ್‌ ಸಿಂಗ್‌ನೊಂದಿಗೆ ನಂಟು ಹೊಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೀಗ ಮೋದಿ ಭೇಟಿಯಲ್ಲಿ ಭಾರಿ ಉಗ್ರರ ಸಂಚು ಬಯಲಾಗಿದೆ. ಇದರಿಂದ ಪಂಜಾಬ್ ಪೊಲೀಸರು ಭದ್ರತೆ ಹೆಚ್ಚಿಸಿದ್ದರೆ , ಇತ್ತ ಭಾರತೀಯ ಸೇನೆ ಕೂಡ ಹದ್ದಿನ ಕಣ್ಣಿಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!