September 16, 2026
Wednesday, September 16, 2026
spot_img

ಪಪ್ಪು ಯಾದವ್ ಹತ್ಯೆಗೆ ಸಂಚು? ದೆಹಲಿ ನಿವಾಸದಲ್ಲಿ ಮಾಧ್ಯಮಗೋಷ್ಠಿ ವೇಳೆ ಭಾರಿ ಗದ್ದಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದ ಪೂರ್ಣಿಯಾ ಕ್ಷೇತ್ರದ ಸ್ವತಂತ್ರ ಸಂಸದ ಪಪ್ಪು ಯಾದವ್ ಅವರ ದೆಹಲಿ ನಿವಾಸದಲ್ಲಿ ಕಲಾಪದ ವಾತಾವರಣ ಉದ್ವಿಗ್ನಗೊಂಡಿದೆ. ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಸಾರ್ವಜನಿಕರಂತೆ ಒಳನುಗ್ಗಿದ ವ್ಯಕ್ತಿಯೊಬ್ಬ ಏಕಾಏಕಿ ಚಾಕುವಿನಿಂದ ದಾಳಿಗೆ ಯತ್ನಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಬೆಂಬಲಿಗರು ಆರೋಪಿಯನ್ನು ಹಿಡಿದು ಥಳಿಸಿ, ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಆರೋಪಿಗಳ ಬಂಧನ ಹಾಗೂ ತನಿಖೆ

ಬಂಧಿತ ದಾಳಿಕೋರನನ್ನು ಉತ್ತರ ಪ್ರದೇಶದ ಬುಲಂದ್‌ಶಹರ್ ಮೂಲದ ಸುಮಿತ್ ಎಂದು ಗುರುತಿಸಲಾಗಿದ್ದು, ಹೊರಗೆ ಕಾರಿನಲ್ಲಿ ಕಾಯುತ್ತಿದ್ದ ಈತನ ಸಹಚರ ಹ್ಯಾಪಿ ಎಂಬಾತನನ್ನೂ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಸುದೀರ್ಘ ವಿಚಾರಣೆ ನಡೆಸುತ್ತಿದ್ದಾರೆ.

ಪೋಲಿಸ್ ಭದ್ರತೆಯ ಬಗ್ಗೆ ಸಂಸದರ ಆಕ್ರೋಶ

ಘಟನೆ ನಂತರ ಮಾತನಾಡಿದ ಪಪ್ಪು ಯಾದವ್, ದೆಹಲಿ ಪೊಲೀಸರ ನಿಷ್ಕ್ರಿಯತೆಯನ್ನು ತೀವ್ರವಾಗಿ ಖಂಡಿಸಿದರು. “ನನಗೆ ದೀರ್ಘಕಾಲದಿಂದ ಕೊಲೆ ಬೆದರಿಕೆಗಳಿದ್ದು, ಸೂಕ್ತ ಭದ್ರತೆ ಕೊಡುವಂತೆ ಮನವಿ ಮಾಡಿದರೂ ನಿರ್ಲಕ್ಷಿಸಲಾಗಿದೆ. ಬೆಂಬಲಿಗರು ಇಲ್ಲದಿದ್ದರೆ ನನ್ನ ಜೀವಕ್ಕೆ ಕಂಟಕವಾಗುತ್ತಿತ್ತು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !