ಬೆಂಬಲ ಹಿಂಪಡೆದ ಮಿತ್ರಪಕ್ಷ; ಬಹುಮತ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್‌ ಖಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಕಿಸ್ತಾನದ ಪ್ರಧಾನಿ ಮಂತ್ರಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದೆ. ಇಮ್ರಾನ್‌ ಖಾನ್‌ ವಿಶ್ವಾಸಮತ ಯಾಚನೆಗೆ ಮುನ್ನವೇ ಆಡಳಿತ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ)ನ ಪ್ರಮುಖ ಮೈತ್ರಿ ಪಕ್ಷ ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್ (ಎಂಕ್ಯೂಎಂ) ಮೈತ್ರಿಯಿಂದ ಹೊರಬಂದು ವಿರೋಧ ಪಕ್ಷ ವಾದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದರಿಂದಾಗಿ ಇಮ್ರಾನ್‌ ನೇತೃತ್ವದ ಸರ್ಕಾರದ ಪತನ ಬಹುತೇಕ ಖಚಿತಗೊಂಡಂತಾಗಿದೆ.
ಮೈತ್ರಿ ಮುರಿದುಕೊಂಡಿದ್ದೇವೆ. ಹೆಚ್ಚಿನ ಮಾಹಿತಿಯನ್ನು ನಾಳೆ ಮಾಧ್ಯಮಗೋಷ್ಠಿಯಲ್ಲಿ ತಿಳಿಸುತ್ತೇವೆ ಎಂದು ಪಿಪಿಪಿ ಪಕ್ಷದ ನಾಯಕ ಬಿಲಾವಲ್ ಬುಟ್ಟೋ ಜರ್ದಾರಿ ಟ್ವೀಟರ್‌ ಮೂಲಕ ತಿಳಿಸಿದ್ದಾರೆ.
ನಾಳೆ (ಮಾರ್ಚ್ 31) ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸಮತ ಯಾಚನೆ ಮಾಡಬೇಕಿತ್ತು. ಅದಕ್ಕೂ ಮೊದಲು ನಡೆದಿರುವ ಬೆಳವಣಿಗೆಗಳಿಂದಾಗಿ ಸರ್ಕಾರ ಬಹುಮತವನ್ನು ಕಳೆದುಕೊಂಡಿದೆ. ಪಾಕಿಸ್ತಾನ ಸಂಸತ್ತಿನ ಒಟ್ಟು ಸದಸ್ಯ ಬಲ 342. ಮೈತ್ರಿಪಕ್ಷದ ಸರ್ಕಾರದಿಂದ ಹೊರನಡೆದಿದ್ದರಿಂದ ಆಡಳಿತ ಪಕ್ಷದ ಸದಸ್ಯಾ ಬಲ 164ಕ್ಕೆ ಕುಸಿದಿದೆ. ಇಮ್ರಾನ್‌ ನಾಳೆ ಸರ್ಕಾರವನ್ನು ಉಳಿಸಿಕೊಳ್ಳಬೇಕಾದರೆ ಮ್ಯಾಜಿಕ್‌ ನಂಬರ್‌ ಆಗಿರುವ 172 ಸದಸ್ಯರ ಬೆಂಬಲವನ್ನು ಪ್ರಸ್ತುತಪಡಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!