October 16, 2026
Friday, October 16, 2026
spot_img

ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತು: ಜಾಗತಿಕ ಮೂಲಸೌಕರ್ಯಗಳ ಮೇಲಿನ ದಾಳಿಗೆ ಖಂಡನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮುಂದುವರಿದ್ದಿದ್ದು, ಇದರ ನಡುವೆ ಇಂದು ಪ್ರಧಾನಿ ಮೋದಿ ಅವರು ಇರಾನ್ ಅಧ್ಯಕ್ಷ ಡಾ. ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಈದ್ ಶುಭಾಶಯ ತಿಳಿಸಿದ್ದು, ಜೊತೆಗೆ ಜಾಗತಿಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ.

ಈ ಕುರಿತು ಪ್ರಧಾನಿ ಮೋದಿ ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಮಾಹಿತಿ ನೀಡಿದರು. ‘ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಜತೆ ದೂರವಾಣಿ ಮೂಲಕ ಮಾತನಾಡಿ ಈದ್ ಮತ್ತು ನೌರುಜ್ ಶುಭಾಶಯಗಳನ್ನು ತಿಳಿಸಿದ್ದೇವೆ. ಈ ಹಬ್ಬದ ಸಂಭ್ರಮ ಮದ್ಯ ಪ್ರಾಚ್ಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ತರಲಿ ಎಂದು ತಿಳಿಸಿದ್ದಾರೆ.

ಇರಾನ್ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ ಮೋದಿ, ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಹಾಕುವ ಮತ್ತು ಜಾಗತಿಕ ಪೂರೈಕೆಯ ಮೂಲ ಆಧಾರಗಳಿಗೆ ಅಡ್ಡಿಪಡಿಸುವ ದಾಳಿಗಳನ್ನು ಖಂಡಿಸುತ್ತೇನೆ. ವ್ಯಾಪಾರ ಮಾರ್ಗಗಳು ಸದಾ ಮುಕ್ತವಾಗಿರಬೇಕು. ಯಾವುದೇ ರೀತಿಯ ಅಡೆತಡೆಗಳಿಲ್ಲದೆ ಸುರಕ್ಷಿತವಾಗಿ ಇರುವುದು ಅತೀ ಮುಖ್ಯ ಎಂದು ಹೇಳಿದರು.

ಇದೇ ವೇಳೆ ಭಾರತೀಯರ ರಕ್ಷಣೆಗೆ ನಿರಂತರ ಬೆಂಬಲ ನೀಡಿದ ಇರಾನ್‌ ನಡೆಯನ್ನು ಶ್ಲಾಘಿಸಿದರು.

Must Read