ಲತಾ ಮಂಗೇಶ್ಕರ್‌ ಗೆ ಅಂತಿಮ ನಮನ ಸಲ್ಲಿಸಲು ಮುಂಬೈಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್;‌

ಭಾರತದ ಗಾನ ಕೋಗಿಲೆ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರಿಗೆ ಅಂತಿಮ ನಮನ ಸಲ್ಲಿಸಲು ಪ್ರಧಾನಿ ಮೋದಿ ಮುಂಬೈ ಗೆ ಆಗಮಿಸಲಿದ್ದಾರೆ.
ಲತಾ ಮಂಗೇಶ್ಕರ್‌ ಅವರ ಪಾರ್ಥೀವ ಶರೀರವನ್ನು ಅವರ ನಿವಾಸ ಪ್ರಭು ಕುಂಜ್‌ ನಲ್ಲಿ ಇರಿಸಲಾಗಿದೆ. ಇಂದು ಸಂಜೆ 6:30ಕ್ಕೆ ಮುಂಬೈ ನ ಶಿವಾಜಿ ಪಾರ್ಕ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಎಲ್ಲಾ ಅಗತ್ಯ ಸಿದ್ಧತೆ ನಡೆಯುತ್ತಿದೆ.
ಬಾಲಿವುಡ್‌ ಸೇರಿದಂತೆ ಎಲ್ಲಾ ಚಿತ್ರರಂಗದ ದಿಗ್ಗಜರು ಲತಾ ಮಂಗೇಶ್ಕರ್‌ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಅಮಿತಾಭ್‌ ಬಚ್ಚನ್‌, ಶ್ರದ್ಧಾ ಕಪೂರ್, ಅನುಪಮ್‌ ಖೇರ್‌, ಜಾವೇದ್‌ ಅಖ್ತಾರ್‌, ಸಚಿನ್‌ ತೆಂಡೂಲ್ಕರ್ ಸೇರಿ ಹಲವು ಗಣ್ಯರು ಲತಾ ಮಂಗೇಶ್ಕರ್‌ ಅವರಿಗೆ ಅಂತಿಮ ವಿದಾಯ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!